• ತೇಜಸ್ವಿ ಮನೆ

  ಅದು ೨೦೧೬ನೇ ಇಸವಿ. ಕಾಲೇಜು ಮುಗಿದು ಮೂರು ವರುಷಗಳಾಗುತ್ತಿದ್ದ ಕಾಲ. ಆ ವರುಷದ ಬೇಸಿಗೆ ಬಹಳ ಬಿರುಸಾಗಿತ್ತು. ಇಡೀ ಬೇಸಿಗೆಯಲ್ಲಿ ಹೊರಗೆಲ್ಲೂ ಅಡ್ಡಾಡೋಕೆ ಹೋಗದೆ, ಬರೀ ಮನೆ, ಕೆಲಸ ಇಷ್ಟರಲ್ಲೇ ಇತ್ತು. ಅಂತೂ ಬೇಸಿಗೆ ಮುಗಿಯುವ ಹೊತ್ತಿಗೆ, ಗೆಳೆಯರೆಲ್ಲ ಮನಸ್ಸು ಮಾಡಿ, ಎತ್ತ ಕಡೆಯಾದರೂ ತಿರುಗಾಡೋಕೆ ಹೋಗೋಣ ಎಂದು, ಒಂದು ಶುಕ್ರವಾರದ ರಾತ್ರಿ ಊರು ಬಿಟ್ಟು ಹೊರಟೆವು. ಒಂಬತ್ತು ಗಂಟೆ ಬೆಂಗಳೂರ ಬಿಟ್ಟಾಗ, ಸಕಲೇಶಪುರ ತಲುಪಿದಾಗ ನಡುರಾತ್ರಿ ಮೂರು ಗಂಟೆ...


 • ಜೊತೆ

  ಜೊತೆಯಾಗಬೇಕು ಎದೆಗೆ ಎದೆ, ತೊಡೆಗೆ ತೊಡೆ, ತೋಳಿಗೆ ತೋಳು ತಟ್ಟಿ, ಜೊತೆ ನಿಲ್ಲೋಳು. ಬೆಟ್ಟ, ಕಾಡು, ಕಣಿವೆ, ನಾಡಲ್ಲೂ ನೆರಳಾಗಿರೋಳು. ಮುಗಿಲೆತ್ತರದ ಬೆಟ್ಟ ಏರೋಳು, ಕಡಲಾಳಕೆ ಈಜೋಳು, ಜೊತೆಯಾಗಬೇಕು ಬದುಕಿಗೆ ಇಂತೋಳು. ಊರೊಂದಿಗಿನ ಕಾಳಗದಲಿ ಬೆನ್ನಿಗಿರೋಳು, ತುಂಬಿಕೊಂಡು ಸಿಡುಗೋಪ ಕಂಗಳ. ಮೃದುವಾಗಿ ದಿನದಿನವೂ ಹೂಗಳ ಬೆಳೆಸೋಳು, ತುಂಬುಂವಂತೆ ಮನೆಯಂಗಳ. ಜೊತೆಯಾಗಬೇಕು ಎದೆಗೆ ಎದೆ, ತೊಡೆಗೆ ತೊಡೆ, ತೋಳಿಗೆ ತೋಳು ತಟ್ಟಿ, ಜೊತೆ ನಿಲ್ಲೋಳು. ಬದುಕಿನ ಬೆಳಕಲ್ಲಿ ನೆರಳಾಗಿರೋಳು, ಕತ್ತಲೆಯಲ್ಲಿ ಅರಿವಾಗುವವಳು,...


 • ಗೋಡೆ

  ದೊಡ್ಡ ಗೋಡೆಯೊಂದಿರಬೇಕು ಮನೆಯಲಿ. ಹಳೆ ನೆನಪು ಮೆಲುಕು ಹಾಕಲು. ಮನದ ಮೇಲೆ ಗೀಚಿದ, ಕಲೆಗಳ ಅಳಿಸಲು. ದೊಡ್ಡ ಗೋಡೆಯೊಂದಿರಬೇಕು ಮನೆಯಲಿ, ಎಲ್ಲೂ ಆಡದ ಮಾತ ಬರೆಯಲು, ಯಾರೂ ಕೇಳದ ಗುಟ್ಟ ತೆರೆಯಲು. ಬಿಳಿ ಗೊಡೆ ಇರಬೇಕು ಮನೆಯಲಿ, ಮನದ ಬಣ್ಣ ಎರಚುತಿರಲು, ಮನಸನ್ನು ಮತ್ತೆ ತಿಳಿ ಮಾಡಲು. - ಆದರ್ಶ


 • ಓಟ

  ಬಿರುಗಾಳಿಯಂತ ನಡೆ, ಬಿರುಸಾದ ನುಡಿ. ಬೆಂಕಿಯಂತ ನೋಟ, ಇಂತವಳ್ಹಿಂದೆ ಎಲ್ಲ ಓಟ. ಹಗುರ ನಡೆ, ಬಿಗಿಯಲ್ಲ ಜಡೆ, ಇರದು ಒಪ್ಪುವ ಒಳನೋಟ, ಇಂತವಳಿಂದ ದೂರ ಓಟ. - ಆದರ್ಶ


 • ಧ್ಯಾನ-ವ್ಯಾಯಾಮ

  ಬೇರೆ ಯಾವ ಪ್ರಾಣಿನೂ ವ್ಯಾಯಾಮ, ಯೋಗ, ಧ್ಯಾನ ಅಂತ ಏನೂ ಮಾಡಲ್ಲ. ಮಂದಿಯಾದ (ಮನುಷ್ಯನಾದ) ನಾವುಗಳು ಮಾತ್ರ ಇವುಗಳಲ್ಲಿ ತೊಡಗಿಸಿಕೊಂಡಿರೋದು. ಬೇರೆಲ್ಲ ಪ್ರಾಣಿ, ಹಕ್ಕಿಗಳು ಇವುಗಳಿಲ್ಲದೆ ಆರೋಗ್ಯ, ನೆಮ್ಮದಿ ಇಂದಿದ್ದಾವೆ ಅಂತ ಅನ್ಕೋಬೋದು. ನಮ್ಮ ಜೀವನದ ಬಗೆ ಹೆಂಗೆಂಗೋ ಇರೋದಕ್ಕೆ, ಅದಕ್ಕೆ ತಕ್ಕಂಗೆ ಬದುಕನ್ನ ಸರಿ ಮಾಡಿಕೊಂಡು ಗಟ್ಟಿಯಾಗಿರೋಕೆ ಈ ಹೆಚ್ಚುವರಿ ಕೆಲಸಗಳ ಮಾಡಬೇಕಾ? ಈಗ ಹೊಸ ಕಾಲ, ಬಹಳ ಹೊತ್ತು ಕೂತು ಮಾಡೋ ಕೆಲಸ, ಬಾಳಲ್ಲಿ ಯೋಚನೆಗಳೆ ಹೆಚ್ಚು,...