• ಕಾಲ ಕಳೆದೋಯ್ತು

    ನೆನ್ನೆಯೇ ಆಡಿದ್ದೆ ಎಳೆತನದಿ, ಇದೀಗ ನಿಂತಿಹೆನು ಕೊನೆಗಾಲದಿ. ಎಲ್ಲಿ ಹೋಯಿತೋ ಕಾಲ ಸರಿದು, ಹಿಡಿತದಲ್ಲಿ ಸಾಗಿತ್ತೇ ಬದುಕು ಹರಿದು? ಅಲೆಗಳಿಗೇ ತಿಳಿಯಲಿಲ್ಲ ತೀರದ ದೂರ, ಗಾಳಿಯೊಡನೆ ಒಂದಾಗಿ ಉರುಳಿ ಬರಲು. ಒಲಿಯದ ಒಲವಿನ ನೆನಪುಗಳೇ ಭಾರ, ನೆನಪುಗಳಿಗೇ ನಿಲುಕಿತ್ತೇ ಅನುಭವದ ಸಾರ? ನೆನ್ನೆಯೇ ನೋಡಿದ್ದೆ ಮುಗಿಲ ಮಿಂಚು, ಮತ್ತೆ ಕಾಣುವುದೇ ಆ ಬೆಳಕು. ಇದೀಗ ಕಾಣುತಿದೆ ಮುಗಿಲ ಅಂಚು, ಮನವು ಹಾಕುತಿದೆ ಆ ಮಳೆಯ ಮೆಲುಕು. - ಆದರ್ಶ


  • ನೀನು

    ಎದೆ ಬಿರಿವ ಒಲವ ತುಂಬಿದೆ, ಸಣ್ಣ ಮನದ ತುಂಬ, ಒಳಗಣ್ಣ ಅಂಗಳದಿ ಈಗ, ಬರಿ ನಿನ್ನದೇ ಬಿಂಬ. ಮತ್ತೆ ಬೀಸಿತು ತಂಗಾಳಿ, ನಿನ್ನ ದನಿಯ ಕೇಳಲು, ಎಂದೊ‌ ಮರೆತ ರಾಗವೀಗ, ಜೀವತಂತಿ ಮೀಟಲು. ಜಗದ ಎಲ್ಲ ಪುಣ್ಯ ಒಮ್ಮೆ ಒಲಿದು ಬಂದರೆ ಹೆಂಗೆ, ನಸುಕಿನ ಬೆಳಕಿಗೆ ಹೂವು ಅರಳಿ ಪರಿಮಳ ಬೀರಿದಂಗೆ, ನೆಲ ಹಸಿರಾಗಿಸೊ ಮಳೆ ಹನಿದಿದೆ ಸಣ್ಣ ಮನದ ತುಂಬ, ಒಳಗಣ್ಣ ಅಂಗಳದಿ ಈಗ, ಬರಿ ನಿನ್ನದೇ ಬಿಂಬ....


  • ನಾ ಬಿದ್ದೆ

    ಅದೊಂದು ದಿನ ಮುಂಜಾನೆ ಹೊರಟು ಕೊಟ್ಟಿಗೆಹಾರಕ್ಕೆ ಹೋಗ್ಬೇಕಿತ್ತು. ಅದಕ್ಕಾಗಿ ಬೇಗ ಎದ್ದು ರೆಡಿಯಾಗಿ ಆರು ಗಂಟೆಗೆ ಮನೆ ಬಿಟ್ಟು , ಏಳು ಗಂಟೆ ಹೊತ್ತಿಗೆ ಬೆಂಗಳೂರ ಹೊರಗಿದ್ದ ಗೆಳೆಯನ ಮನೆಗೆ ತಲುಪಿ , ಅಲ್ಲಿ ನನ್ನ ಬೈಕನ್ನ ನಿಲ್ಲಿಸಿ ಅಲ್ಲಿಂದ ಮುಂದಕ್ಕೆ ಎಲ್ರೂ ಕಾರಲ್ಲಿ ಹೋಗೋರಿದ್ವಿ. ಮನೆ ಬಿಟ್ಟು ಹತ್ತು ನಿಮಿಷಕ್ಕೆ ಒಂದು ಸಣ್ಣ ಸೋನೆ ಮಳೆ ಬಿತ್ತು. ಬೈಕ್ ನಿಲ್ಲಿಸಿ ಮಳೆ ಕೋಟು ಪ್ಯಾಂಟು ಹಾಕ್ಕೊಳ್ಳಲಾ ಅತವಾ ಹಂಗೆ...


  • ತ್ರಿಶೂರ್

    ಬೆಂಗಳೂರು ಬೆಳಗ್ಗೆ ೬ ಗಂಟೆಗೆ ಎದ್ದು ಸಚಿನ್ ನಂಗೆ ಫೋನ್ ಮಾಡಿ, ತ್ರಿಶೂರಲ್ಲಿ ನಡಿಯೋ 'ಪೂರಮ್' ಜಾತ್ರೆಗೆ ಹೋಗೋಣ್ವ ಅಂದ. ಸರಿ, ವಿಷ್ಣು ನೂ ಕೇಳೋಣ ಅಂದು ಅವ್ನಿಗೂ ಫೋನ್ ಮಾಡಿದ್ವಿ. ವಿಷ್ಣು ನೂ ಹೊರಡೋಣ ಅಂದು ಅರ್ಧ ಗಂಟೆಯಲ್ಲಿ ಸಿದ್ದರಾಗಿ ಮನೆ ಬಿಟ್ವಿ. ದಾರಿಲಿ ನಮ್ಮ ದೇಶದ "ಅತೀ ದೊಡ್ಡ ಹೊಟೇಲ್" ಅಂತ ಹೇಳ್ಕೋಂಡು ಓಡಾಡ್ತೀರೊ ರಾಮೇಶ್ವರಂ ಕೆಫೆಲಿ ತಿಂಡಿ ತಿಂದು ತಮಿಳುನಾಡಿನ ಕಡೆಗೆ ಹೊರಟ್ವಿ. ತಿಂಡಿ ತಕ್ಕ...


  • ಮದುವೆ ಗಿದುವೆ ಇತ್ಯಾದಿ

    "ಗೇರ್ ಲೆಸ್ ಗಾಡಿ ತಗೊಳ್ಳ, ಇಲ್ಲಾ ಬೈಕ್ ತಗೊಳ್ಳ, ಇಲ್ಲಾ ಸಕೇಂಡ್ ಹ್ಯಾಂಡ್ ಕಾರ್ ತಗೊಂಡ್ ಬಿಡ್ಲ " ಅಂತ ಫ್ರೆಂಡ್ ಒಬ್ಬ ಫೋನ್ ಮಾಡಿ ಕೇಳಿದಾಗ , "ಗುರು ಈ ಟ್ರಾಫಿಕ್ ನೋಡ್ತಾ ಇದ್ರೆ ಬೈಕ್ ಬದ್ಲು ಆಂಬುಲೆನ್ಸ್ ನಲ್ಲಿ ಹೋಗೋದು ಬೆಟರ್ ಅನ್ಸುತ್ತೆ. ಮನೆ ಬಿಡ್ತೀವಿ ಆಫೀಸ್ ಮುಟ್ತಿವೋ ಇಲ್ವೋ ಗೊತ್ತಾಗಲ್ಲ, ಆಫೀಸ್ ಬಿಡ್ತೀವಿ ಮನೆ ಸೇರ್ತಿವೋ ಇಲ್ವೋ ಗೊತ್ತಾಗಲ್ಲ" ಅಂತ ಹೇಳ್ದೆ. ಅದಕ್ಕವನು ಹೋಗೋಗಿ ನಿಂಗ್...