ಸಾವಿರಾರು ವರುಷಗಳ ಕರ್ನಾಟಕದ ಇತಿಹಾಸದಲಿ ಕನ್ನಡಕ್ಕಾಗಿ ಕೆಲಸ ಮಾಡಿ ಕನ್ನಡದ ಹೆಸರು ಬೆಳೆಸಿ, ಕನ್ನಡದ ತೂಕ ಹೆಚ್ಚಿಸಿದವರು ಅನೇಕರು. ಅವರಂತೆ ಕರ್ನಾಟಕಕ್ಕಾಗಿ, ಕನ್ನಡಕ್ಕಾಗಿ ನಮ್ಮ ಗೆಳೆಯರ ಬಳಗದಿಂದ ಸಣ್ಣ ಸಾಹಿತ್ಯ ಚಳುವಳಿ ನಡೆಸುವ ಉದ್ದೇಶದಿಂದ ಈ ಬ್ಲಾಗ್ ಅನ್ನು ಆರಂಭಿಸಿದ್ದೇವೆ. ಇಲ್ಲಿ ಬರೆಯೋದೆಲ್ಲ ನಮ್ಮ ಜೀವನಕ್ಕೆ ಸಿಕ್ಕ ಅನುಭವ, ಒಡನಾಡಿಗಳು, ಸುತ್ತಲ ಪರಿಸರ ಕೊಟ್ಟ ವಿಷಯಗಳು. ಇದರ ಮೂಲಕ ನಮ್ಮ ಕೈಲಾದಷ್ಟು ಕನ್ನಡ ಕಟ್ಟುವ, ಕನ್ನಡ ಬೆಳೆಸುವ ಕೆಲಸ ನಡೆಸುವುದು ನಮ್ಮ ಗುರಿಯಾಗಿದೆ.