ಅಚ್ಚಕನ್ನಡ
ಕನ್ನಡದ ನಿತ್ಯ ಉತ್ಸವ
-
ಬಾಲ್ಯದ ಮಳೆಗಾಲ
ನಾನು ಸಣ್ಣವಳಿದ್ದಾಗ ನಮ್ಮದು ಕೂಡು ಕುಟುಂಬ, ಮನೆಯಲ್ಲಿ ೫ ಜನ ಮಕ್ಕಳು. ಮಳೆಗಾಲ ಬಂತಂದ್ರೆ, ಅಜ್ಜ ಅಜ್ಜಿಗೆ ಉಳುಮೆ ನಾಟಿಗೆ ಆಳು ಹುಡುಕುವ ಮಂಡೆ ಬಿಸಿ, ಆದರೆ ನಮಗೆ ಬೇಸಿಗೆ ರಜೆ ಪೂರ್ತಿಯ homework ಎರಡೇ ದಿನದಲ್ಲಿ ಮುಗಿಸುವ ತರಾತುರಿ. ಅಜ್ಜ ಕರೆಸಿದ ಗದ್ದೆ ಉಳುವವ ಜೋಡಿ ಎತ್ತಿಗೆ 'ಎಡತ್' 'ಬಲತ್' ಅಂತ ಸೂಚನೆ ಕೊಟ್ಟು ಊಳುತ್ತಿರುವಾಗ ನಮ್ಮ ತಮ್ಮ 'ಅನ್ನು' ನೇಗಿಲ ಮೇಲೆ ನಿಂತು ಅವನ ಸಾಹಸ ಪ್ರದರ್ಶನ...
-
ಹುಡುಗಿಯಲ್ಲಿ ಒಲವು
ನರಕದಲ್ಲಿ ಸ್ವರ್ಗ ಇದ್ದಂಗೆ, ನೋವಲ್ಲೂ ನಲಿವಿದ್ದಂಗೆ, ಘೋರದಲಿ ಮುದ್ದು ಮಾಡಿದಂಗೆ, ಹುಡುಗಿಯಲ್ಲಿ ಒಲವು. ಬೇಸಿಗೆಯಲಿ ಚಳಿ ಆದಂಗೆ, ಕಡಲಲ್ಲಿ ಸಿಹಿ ನೀರು ಸಿಕ್ಕಂಗೆ. ನಿಸ್ಸಾರದಲಿ ಸೊಗಸು ಇದ್ದಂಗೆ, ಹುಡುಗಿಯಲ್ಲಿ ಒಲವು. ಕೊನೆಯಲ್ಲಿ ಬದುಕಿದಂಗೆ, ಮುಳುಗಿದ ಮೇಲೆ ಎದ್ದಂಗೆ, ಅರಳುವಾಗ ಹೂವ ಹರಿದಂಗೆ, ಹುಡುಗಿಯಲ್ಲಿ ಒಲವು. - ಆದರ್ಶ
-
ಕರ್ಮ
ನಾ ಸಣ್ಣೋನಾಗಿದ್ದಗಿಂದಲೂ 'ನಮ್ಮ ಕರ್ಮ', 'ನಮ್ಮ ಹಣೆಬರಹ' ಅನ್ನೋದ ಕೇಳ್ತಾ ಬಂದಿದ್ದೀನಿ. ಇತ್ತೀಚಿಗೆ ಕರ್ಮ, ಹಣೆಬರಹ ಅಂದ್ರೆ ಏನು ಅಂತ ಸ್ವಲ್ಪ ತಿಳುವಳಿಕೆಗೆ ಬಂದಾಗಿಂದ ಇವುಗಳ ಬಗ್ಗೆ ಯೋಚನೆ ಮಾಡ್ತಾ ಒಂದಷ್ಟು ಕಾಲನೂ ಕಳೆದಾಗಿದೆ. ಈ ಸಾಲುಗಳೆಲ್ಲ ಆ ಯೋಚನೆಗಳಿಂದ ಬಂದಿರೋದು. ಹಣೆಬರಹ ಅನ್ನೋದು ನಾವು ಹುಟ್ಟೋ ಮೊದಲೇ ನಿರ್ಧಾರವಾಗಿರೋದು, ನಮ್ಮ ಹಣೆಬರಹ ಎಂಬೋದು ದೇವರು ನಮಗಾಗೆ ಬರೆದು ಕಳಿಸಿರೋದು. ಹಣೆಬರಹವನ್ನು ನಾವು ಮೊದಲೇ ಪೂರ್ತಿಯಾಗಿ ಓದಿ ತಿಳಿಯೋದಕ್ಕಾಗಲ್ಲ, ಕಾಲಕಾಲಕ್ಕೆ...
-
ಚಳಿಗಾಲ
ಚಳಿಗಾಲ ಹುಡುಗಿ, ಬಂದಿಲ್ಲಿ ನಿಲ್ಲು, ಆ ದೂರ ಯಾಕೆ, ತೋರಿಸುವೆ ಕಾಮನಬಿಲ್ಲು. ಹುಚ್ಚು ಒಲವ ಒಳಗೆಯೇ, ಇಟ್ಟಿರುವೆ ಯಾಕೆ, ನೀ ಬಳಿಬಂದರೆ, ಹೊತ್ತಿಕೊಳ್ಳುವುದೀ ಬದುಕೆ. ಅರೆಕಾಲ ಬಂದೋಗು, ಮಳೆಯಂತೆ ನೀನು, ನೂರ್ಕಾಲ ನೆನಯುವೆ, ಭುವಿಯಂಗೆ ನಾನು. ಚಳಿಗಾಲಕೆ ನೀ, ಹತ್ತಿರ ಬರಲೆಂಬ ಹರಕೆ, ನಿನ್ನ ಸುತ್ತ ತಿರುಗಿರುವೆ, ನಾನಿಂದು ಅದಕೆ. - ಆದರ್ಶ
-
ಏನಿದು?
ಜೀವನದಲ್ಲಿ ನನ್ನ ಪ್ರಕಾರ ಮುಖ್ಯವಾಗಿ ಬೇಕಾಗಿರುವ ಒಂದು ಗುಣ ಅಂತ ಅಂದ್ರೆ ನಂಬಿಕೆ. ನಾವು ಇನ್ನೊಬ್ಬರ ಮೇಲೆ ನಂಬಿಕೆ ಇಡುವುದಕ್ಕಿಂತ, ನಮ್ಮ ಮೇಲೆ ಇಟ್ಟಿರುವ ನಂಬಿಕೆಯನ್ನು ಕಾಪಾಡಿಕೊಳ್ಳುವುದು ಅತ್ಯಂತ ಅವಶ್ಯಕವಾದದ್ದು ಅಂತ ನನ್ನ ಅಭಿಪ್ರಾಯ. ನೀವೇ ಒಂದು ಸನ್ನಿವೇಶದ ಬಗ್ಗೆ ಯೋಚನೆ ಮಾಡಿ, ನಿಮಗೆ ಮೊದಲನೇ ಬಾರಿಗೆ ಯಾರೊಬ್ಬರದ್ದು ಪರಿಚಯ ಆಗಿರುತ್ತದೆ, ಅವರು ನಿಮ್ಮ ಹತ್ತಿರ ಬಂದು ಸ್ವಲ್ಪ ಹಣ ಕೊಡು ಅಂತ ಕೇಳಿಕೊಳ್ಳುತ್ತಾರೆ ಅಂದುಕೊಳ್ಳೋಣ, ನೀವು ಅವರಿಗೆ ಹಣ...