ಮಳೆಯಾದ ನೀರು ಮತ್ತೆ ಆವಿಯಾಗುವುದೇ,
ಕಡಲ ಸೇರಿದ ಹೊಳೆ ಮತ್ತೆ ಹುಟ್ಟುವುದೆ?
ಬೆಳಗುವ ನೇಸರ ಮುಳುಗಿದ ಮೆಲೆ ಏನು,
ಕತ್ತಲು ಕಳೆಯಲು ಕಾಯುವ ಕಾತುರದ ಕೊನೆ ದಿನ ನಮ್ಮದೆ.

ಎಲೆ ಬಿದ್ದ ಮೇಲೆ ಮರ ಚಿಗುರದೆ,
ಹೂವು ಹರಿದಮೇಲೆ ಹೊಸದರಳದೆ?
ಬೆಳೆದ ಮರ ಉರುಳಿದ ಮೇಲೆ ಏನು?
ನೆರಳ ನೀಡುವಂತೆ ಬೆಳೆವ ಹಂಬಲದ ಕೊನೆ ದಿನ ನಮ್ಮದೆ.

ಬೆಟ್ಟ ಹತ್ತಿ, ಬೆಟ್ಟವ ಇಳಿದರೆ,
ಕಣಿವೆಯ ಕತ್ತಲು ಕವರದೆ?
ನೇಸರ ಮುಳುಗಿ ಇರುಳು ಬಿದ್ದಮೇಲೆ ಏನು,
ಮತ್ತೊಂದು ಮುಂಜಾನೆ ನೋಡುವ ಕೊನೆ ದಿನ ನಮ್ಮದೆ.

- ಆದರ್ಶ