• ಗೋಡೆ

    ದೊಡ್ಡ ಗೋಡೆಯೊಂದಿರಬೇಕು ಮನೆಯಲಿ. ಹಳೆ ನೆನಪು ಮೆಲುಕು ಹಾಕಲು. ಮನದ ಮೇಲೆ ಗೀಚಿದ, ಕಲೆಗಳ ಅಳಿಸಲು. ದೊಡ್ಡ ಗೋಡೆಯೊಂದಿರಬೇಕು ಮನೆಯಲಿ, ಎಲ್ಲೂ ಆಡದ ಮಾತ ಬರೆಯಲು, ಯಾರೂ ಕೇಳದ ಗುಟ್ಟ ತೆರೆಯಲು. ಬಿಳಿ ಗೊಡೆ ಇರಬೇಕು ಮನೆಯಲಿ, ಮನದ ಬಣ್ಣ ಎರಚುತಿರಲು, ಮನಸನ್ನು ಮತ್ತೆ ತಿಳಿ ಮಾಡಲು. - ಆದರ್ಶ


  • ಓಟ

    ಬಿರುಗಾಳಿಯಂತ ನಡೆ, ಬಿರುಸಾದ ನುಡಿ. ಬೆಂಕಿಯಂತ ನೋಟ, ಇಂತವಳ್ಹಿಂದೆ ಎಲ್ಲ ಓಟ. ಹಗುರ ನಡೆ, ಬಿಗಿಯಲ್ಲ ಜಡೆ, ಇರದು ಒಪ್ಪುವ ಒಳನೋಟ, ಇಂತವಳಿಂದ ದೂರ ಓಟ. - ಆದರ್ಶ


  • ಧ್ಯಾನ-ವ್ಯಾಯಾಮ

    ಬೇರೆ ಯಾವ ಪ್ರಾಣಿನೂ ವ್ಯಾಯಾಮ, ಯೋಗ, ಧ್ಯಾನ ಅಂತ ಏನೂ ಮಾಡಲ್ಲ. ಮಂದಿಯಾದ (ಮನುಷ್ಯನಾದ) ನಾವುಗಳು ಮಾತ್ರ ಇವುಗಳಲ್ಲಿ ತೊಡಗಿಸಿಕೊಂಡಿರೋದು. ಬೇರೆಲ್ಲ ಪ್ರಾಣಿ, ಹಕ್ಕಿಗಳು ಇವುಗಳಿಲ್ಲದೆ ಆರೋಗ್ಯ, ನೆಮ್ಮದಿ ಇಂದಿದ್ದಾವೆ ಅಂತ ಅನ್ಕೋಬೋದು. ನಮ್ಮ ಜೀವನದ ಬಗೆ ಹೆಂಗೆಂಗೋ ಇರೋದಕ್ಕೆ, ಅದಕ್ಕೆ ತಕ್ಕಂಗೆ ಬದುಕನ್ನ ಸರಿ ಮಾಡಿಕೊಂಡು ಗಟ್ಟಿಯಾಗಿರೋಕೆ ಈ ಹೆಚ್ಚುವರಿ ಕೆಲಸಗಳ ಮಾಡಬೇಕಾ? ಈಗ ಹೊಸ ಕಾಲ, ಬಹಳ ಹೊತ್ತು ಕೂತು ಮಾಡೋ ಕೆಲಸ, ಬಾಳಲ್ಲಿ ಯೋಚನೆಗಳೆ ಹೆಚ್ಚು,...


  • ವಿವರ

    ವಿವರವೆಲ್ಲಿ ಬದುಕಿಗೆ, ಬೆಳಗ್ಗೆ ಬಂದೋದ ಕನಸಿಗೆ. ಪ್ರವರ ಎಲ್ಲಿ ನಾಳೆಗೆ, ಇಂದು ಸಿಕ್ಕ ಗಳಿಗೆಗೆ. ಹೊಸತು ಸದ್ದು ಕೇಳುವ, ಬದುಕು ಯಾರ ದೀವಿಗೆ? ನಿತ್ಯ ಪ್ರಶ್ನೆ ಕೇಳುವ, ಮನವು ನಡೆವುದೆಲ್ಲಿಗೆ? ವಿವರ ಯಾಕೆ ಬದುಕಿಗೆ, ತಾನೇ ಬಂದ ಒಳಿತಿಗೆ. ಗುರಿಯೊಂದ ಅರಸೊದ್ಯಾಕೆ, ತಾನೇ ತಲುಪಿಸುವುದು ಬಾಳ ನಡಿಗೆ. - ಆದರ್ಶ


  • ಮದುವೆ!!

    ಇನ್ನೆರಡು ವರ್ಷ ಆರಾಮಾಗಿ ಇರೋಣ ಅಂತ ಅಂದ್ಕೊಂಡವನಿಗೆ, ಅಪ್ಪ ಜೋರು ಮಾಡಿ ಹುಡುಗಿ ನೋಡಲು ಕರೆದುಕೊಂಡು ಹೋದಾಗ ಇಲ್ಲದ ಮನಸ್ಸಿನಿಂದಲೇ ಹೋಗಿದ್ದ. ಈಗ ನೋಡಿದ್ರೆ ಹುಡುಗಿ ಅಪ್ಪ ನಿನ್ನನ್ನು ಭೇಟಿ ಮಾಡಬೇಕಂತೆ ಮುಂದಿನ ವಾರ ಯಾವುದಾದ್ರು ರೆಸ್ಟೋರೆಂಟ್ ನಲ್ಲಿ ಭೇಟಿ ಆಗು, ನಾನು ಬರೋಲ್ಲ.. ಒಬ್ಬನೇ ಹೋಗು ಅಂತ ಅಪ್ಪ ಹೇಳಿದಾಗ, “ಅಂತೂ ಒಂದು ಅವಕಾಶ ಸಿಕ್ತು” ಅಂತ ಖುಷಿಯಿಂದ ಒಪ್ಪಿಕೊಂಡ. ಒಬ್ಬನೇ ಅವರನ್ನು ಭೇಟಿ ಮಾಡಿದಾಗ ಏನಾದ್ರು ಕಿತಾಪತಿ...