ಹುಡುಗಿಯಲ್ಲಿ ಒಲವು
by Adarsha
ನರಕದಲ್ಲಿ ಸ್ವರ್ಗ ಇದ್ದಂಗೆ,
ನೋವಲ್ಲೂ ನಲಿವಿದ್ದಂಗೆ,
ಘೋರದಲಿ ಮುದ್ದು ಮಾಡಿದಂಗೆ,
ಹುಡುಗಿಯಲ್ಲಿ ಒಲವು.
ಬೇಸಿಗೆಯಲಿ ಚಳಿ ಆದಂಗೆ,
ಕಡಲಲ್ಲಿ ಸಿಹಿ ನೀರು ಸಿಕ್ಕಂಗೆ.
ನಿಸ್ಸಾರದಲಿ ಸೊಗಸು ಇದ್ದಂಗೆ,
ಹುಡುಗಿಯಲ್ಲಿ ಒಲವು.
ಕೊನೆಯಲ್ಲಿ ಬದುಕಿದಂಗೆ,
ಮುಳುಗಿದ ಮೇಲೆ ಎದ್ದಂಗೆ,
ಅರಳುವಾಗ ಹೂವ ಹರಿದಂಗೆ,
ಹುಡುಗಿಯಲ್ಲಿ ಒಲವು.
- ಆದರ್ಶ