ಬದುಕು
by Adarsha
ಎಲ್ಲಿ ಕಳೆದು ಹೋದೆಯೇ ಬದುಕೆ,
ಹುಡುಕುತಿರುವೆ ನಿನ್ನ,.
ಕರುಣೆ ತೋರು ಬಾ,
ಮತ್ತೆ ಬಿಗಿದಪ್ಪು ನನ್ನ.
ಸುತ್ತಲಿರುವ ಗಾಳಿಯಂಗೆ ಇದ್ದರೂ ಸಿಗಲಾರೆ,
ಹಿಡಿಯಲಿ ಹೇಗೆ ನಿನ್ನ, ಸರಿದಿರುವೆ ಈ ಕೈಯ್ಯಾರೆ.
ಕನಸಂತೆ ನೀನು, ನನಸಾಗು ಬೇಗ,
ಅರಿವಿಗೆ ಬರಬೇಕು, ತೆರೆದು ಹಾಕಿರುವ ಬೀಗ.
ಎಲ್ಲಿ ಉಳಿದು ಹೋದೆಯೇ ಬದುಕೆ,
ಬಂದ ಹಾದಿಯಲ್ಲಿ ನಿನ್ನ ಹುಡುಕಬೇಕೆ?
ಅಲೆಸಬೇಡ ನನ್ನ ಮುಗಿಯದ ಬಯಲಲ್ಲಿ,
ಬೇಗ ಮಳೆ ಸುರಿಸು ಅಂತರಂಗದಲ್ಲಿ.
ಮತ್ತೆ ಬದುಕಬೇಕಿದೆ ಈಗ, ಕರುಣೆ ಚೆಲ್ಲು,
ಉಸಿರಿನಲ್ಲಿ ಬೆರೆತು ಮತ್ತೆ ನೆಲೆ ನಿಲ್ಲು.
- ಆದರ್ಶ