ಯಾರಾದ್ರು ಹುಡುಕೊಡ್ರಿ, ಎಲ್ಲೋದ್ನೊ ಗೊತ್ತಿಲ್ಲ.
ಒಳಗೆಲ್ಲೇ ನೋಡಿರೂ ನಾ ಕೈಗೆ ಸಿಗ್ತಿಲ್ಲ,
ಟೈಮೊಂದು ೪೨೦ ಎದ್ದೆದ್ದು ಓಡತೈತೆ,
ತಿರುತಿರುಗಿ ನೋಡಿದರೂ ಅಟ್ಟಿಸಿ ಬರತೈತೆ.

ಯಾರಾದ್ರೂ ಹೊಡುಕಿಕೊಡ್ರಿ, ನೆರಳೆಲ್ಲೂ ಕಂಡಿಲ್ಲ.
ಬಿಸಿಲಾಗೆ ಅಲಿದಾಟ ಇನ್ನೂ ಯಾಕೊ ನಿಂತಿಲ್ಲ.
ಊರೊಂದು ಕಾಣದು, ಸುತ್ತೆಲ್ಲ ಬಯಲು,
ಎತ್ತೆತ್ತ ನೋಡಿದರೂ ಕಣ್ಣಿಗೆ ಅಮಲು.

ಯಾರಾದ್ರು ಹುಡುಕಿಕೊಡ್ರಿ, ಎಲ್ಲಿದ್ದೀನೊ ಗೊತ್ತಿಲ್ಲ.
ಹೊರಗೆಲ್ಲಿ ನೋಡಿರೂ ನಾನೇ ಕಾಣ್ತಿಲ್ಲ.
ಹೊತ್ತಿದು ಸಿಲುಕಿದೆ, ತನ್ನದೆ ಸುಳಿಯಲ್ಲಿ,
ಬದುಕೊಂದು ಬಯಲಾಟ, ನನ್ನದೆ ಕೈಯ್ಯಲ್ಲಿ.

- ಆದರ್ಶ