ನಾವು ಗೆಲ್ಲಬೇಕು
by Adarsha
ನಡುವಲ್ಲಿ ಒಂದು ಸುಡುಗಾಲ ಬೇಕು!
ಬರಗಾಲವೂ ನಮಗೆ ಯುಗಾದಿಯಾಗಬೇಕು.
ಕೋಟಿ ಯುಗ ಸೋತಿರುವಲ್ಲಿ ನಾವು ಗೆಲ್ಲಬೇಕು!
ಜೀವನದಿ ದಾರಿ ಕವಲೊಡೆದೇ ಸಾಗಬೇಕು
ಬರೆದಾಗ ಸ್ನೇಹಗೀತೆಯ ಸ್ವರ್ಣಾಕ್ಷರದಲ್ಲೇ ಇರಬೇಕು.
ಕೋಟಿ ಜನ ಬೇರೆಯಾದಲ್ಲಿ ನಾವು ಸೇರಬೇಕು!
ಭಿನ್ನತೆ ಏನೇ ಇರಲಿ ಹಗಲು ಇರುಳು ಬೇಕು
ಕೊರತೆ ಏನೇ ಇರಲಿ ಒಬ್ಬರಿಗೊಬ್ಬರು ಇರಬೇಕು.
ಕೋಟಿ ಯೋಚನೆ ಸೋತಿರುವಲ್ಲಿ ನಾವು ಗೆಲ್ಲಬೇಕು!
- ಆದರ್ಶ