• ನಾಕ

  ಕೈಕೊಡೊ ಊರಲ್ಲಿ, ಚೊಂಬು ಕೊಡೋಳು ಸಿಕ್ಳು, ಬದುಕು ನಶ್ವರ ಅನ್ಕಂಡಿದ್ದೋನಿಗೆ, ಹಿಂಗೆ ಕಟ್ಟಾಕಿದ್ಯಲ್ಲೊ ಚೊಂಬೇಶ್ವರ. ಈಗೆತ್ಲಾಗೆ ಓಡೋಗ್ಲಿ, ಸುತ್ತೆಲ್ಲ ಇವ್ಳೆ. ಹೊತ್ತನ್ನ ಕಳಿತಾಳೆ ಮಾತುಮಾತಲ್ಲೆ. ಮರುಮಾತೆ ಬಾರದು, ಏನಂತ ಹೇಳ್ಲಿ, ಗೊಂದಲ ಏನೂ ಇಲ್ಲ, ನಾ ಕಟ್ಟಾಕಿರುವ ಗೂಳಿ. ಕೈಕೊಡೋರ ನಡುವೆ, ಚೊಂಬು ಕೊಡೋಳು ಸಿಕ್ಳು, ಬದುಕು ಆಥರ ಅಂತಿದ್ದೋನಿಗೆ, ಈಥರ ಮಾಡಿದ್ಯಲ್ಲೊ ಚೊಂಬೇಶ್ವರ. ಅಲ್ಲಿಲ್ಲ ಇಲ್ಲಿಲ್ಲ ಇದರಂಗೆ ಹೋಲಿಕೆ, ಇವಳ ಜಗಳವು, ಈ ಮನೆಗಂತೆ ಮಲ್ಲಿಗೆ. ಒಡವೆ, ಅಲಂಕಾರ,...


 • ನೀನಿರುವೆಯಾ?

  ಸೋತರೆ ಎತ್ತಲ್ಲೊಲ್ಲೆ, ಗೆದ್ದರೆ ಪ್ರಶಂಸಿಸಲ್ಲೊಲ್ಲೆ, ಅವ ಹೆಚ್ಚೆಂದು ಹಿಗ್ಗಿಸಲ್ಲೊಲ್ಲೆ, ಇವ ಕೀಳೆಂದು ತಗ್ಗಿಸಲ್ಲೊಲ್ಲೆ, ನಿನ್ನ ಮೊಗವನು ತೋರಲೊಲ್ಲೆ, ಹುಡುಕ ಹೋದರೆ ಸಿಗಲ್ಲೊಲ್ಲೆ . ಬೈದವನಲ್ಲ ಅಪ್ಪನಂತೆ, ಮುದ್ದಾಡಿದವನಲ್ಲ ಅಮ್ಮನಂತೆ, ಬಾ ಎಂದು ಕರೆದವನಲ್ಲ, ಇದು ಬೇಕೆಂದು ಕೇಳಲಿಲ್ಲ. ಹುಟ್ಟುತ್ತಲೇ ಹೇಳುವರು ನೀ ಇರುವೆ ಮೇಲೆ, ಬೆಳೆಯುತ್ತ ತಿಳಿಸಿದರು ನಿನ್ನ ಕರ್ಮಗಳ ಲೀಲೆ, ನಿನ್ನ ನೆನೆದರೆ ಹೆದರುವರೆಲ್ಲ, ಆದರೆ ನಿನ್ನ ಕಂಡವರಾರು ಇಲ್ಲ. ನಡೆಸುತ್ತಿರುವರು ನಿನ್ನ ಹುಡುಕುವ ಸಂಶೋಧನೆ, ಕೆಲವರಿಗೆ ಅದುವೇ...


 • ಕರಗು

  ಕರಗದಿರುವ ಮನಸ್ಸು ಉಂಟೆ, ನೀರು ಬಿದ್ದ ಕಲ್ಲು ಒರಟೆ? ಬದುಕನಿಂದ ಕಲಿತ ಮನಕೆ, ಯಾವುದರಿಂದ ಏನು ತಂಟೆ. ಸಾವಿರ ತಿರುವು ಬಂದಾಗ ನಿತ್ಯ ಕಾಲ ಬಳಿಗೆ, ಸಾವಿರ ಭಾವ ಬಡಿದಾಗ ಮನಕೆ ಒಂದೇ ಸರಿಗೆ, ಒಡನಾಟದಿ ಕಲೆವ ಮನವು, ಓಗೊಡದೆ ಇರುವುದೆ ಮತ್ತೊಬ್ಬರ ಗೋಳಿಗೆ. ಕರಗಿಬಿಡಲಿ ಎಲ್ಲ ಬೇಗುದಿ, ಎದೆಯ ತುಂಬುತಾ ನಿತ್ಯ ನೆಮ್ಮದಿ, ಎಲ್ಲ ಮನ್ನಿಸಿ ಕರಗಿಬಿಡು, ಹಿಡಿದು ನಡೆ ನೀ ಹೊಸದೊಂದು ಹಾದಿ. - ಆದರ್ಶ


 • ಅನುಭವ

  ಬೀಜ ಇಟ್ಟು, ಗೊಬ್ಬರ ಹಾಕಿ, ಮಣ್ಣು ಮುಚ್ಚಿ, ನೀರ ಬಿಡಿ, ಗಿಡ ಹುಟ್ಟಿದಮೇಲೆ ಅದನ್ನ, ಅದರ ಅನುಭವಕೆ ಬಿಡಿ. ಪ್ರಾಣಿ, ಹಕ್ಕಿ, ಹುಳು ತಿನ್ನಲಿ, ಬೆಳೆಯದಂಗೆ ಸೊರಗಲಿ, ಅದರ ಜೀವ ಅದರದು, ತಾನೇ ಹೋರಾಡಲು ಬಿಡಿ. ಬೆಳೆದು ನಿಂತು ಹೆಮ್ಮರವಾಗಲಿ, ನಿತ್ಯ ನೂರು ಹಣ್ಣು ಬಿಡಲಿ, ಅದರ ಹಣೆಬರಹ ಅದರದು, ಅದರ ಅನುಭಕೆ ಬಿಡಿ. ಬೆಳೆದ ಮರ ಬಾಗದು, ಜೋತು ಬಿದ್ದರೂ ಹಣ್ಣು ಕೊಡದು, ಕಾಲ ಬಂದಾಗ ಬರುವುದು, ಬದುಕ...


 • ಹಾಫ್ ಟಿಕೆಟ್

  "ಮುಂದಿನ ವಾರ ದೀಪಾವಳಿ ಗೆ ಫ್ಯಾಕ್ಟರಿ ಪೂಜೆ ಇರುತ್ತೆ, ಪೂಜೆ ಮಾರನೇ ದಿನ ರಜ ಕೊಡ್ತಾರೆ, ಜೊತೆಗೆ ಐನೂರೋ ಸಾವಿರನೊ ಕಾಸು ಕೂಡ ಕೊಡಬಹುದು" ಅಂತ ಜೊತೆಯಲ್ಲಿದ್ದವನು ಹೇಳಿದಾಗ ಇವನಿಗೆ ಸ್ವಲ್ಪ ಖುಷಿಯಾಗಿರಬಹುದು. ಕಳೆದ ಆರು ತಿಂಗಳಿಂದ ರಜ ತೆಗೆದುಕೊಂಡಿರಲಿಲ್ಲ , ಓನರ್ ಕೂಡ ಕೊಟ್ಟಿರಲಿಲ್ಲ. ಶನಿವಾರ ಭಾನುವಾರ ಅನ್ನದೆ ಕೆಲಸ ಮಾಡುತ್ತಿದ್ದ. ಆರು ತಿಂಗಳ ಮೊದಲು ಹೀಗೆ ಇರಲಿಲ್ಲ. ಅಪ್ಪ ಸಾಯುವ ವರೆಗೂ ಅಪ್ಪ ಮಾಡಿದ್ದ ಸಾಲದ ಬಗ್ಗೆ...