ರಕ್ಕಸ
by Adarsha
ಒಳಗೊಬ್ಬ ರಕ್ಕಸ ಬಿಗಿಹಿಡಿದು ಕುಳಿತಾನೆ,
ಕಾಡೊಳಗೆ ಕುಳಿತಂಗೆ ಗಂಡಾನೆ
ನನ್ನೊಳಗೆ, ಸಿಟ್ಟೆಲ್ಲ ಹಿಡಿದಿರುವೆ ನಾನೆ.
ಮಳೆ ತುಂಬಿ ಮೋಡ ಕರಗದೆ ನಿಂತಂಗೆ,
ಹೊಳೆ ತುಂಬಿದರೂ ನುಗ್ಗಿ ಹರಿಯದಂಗೆ
ನನ್ನ, ಭಾವನೆಯಲ್ಲ ಕಟ್ಟಿಟ್ಟ ಸೋಗೆ.
ಒಳಗೊಬ್ಬ ರಕ್ಕಸ ಕುಣಿದಾಡುತಾನೆ
ತಲೆಮೇಲೆ ಕುಂತಂಗೆ ರುದ್ರ
ಇನ್ನು, ಹೊಲದೊಳಗೆ ನುಗ್ಗಲು ಕಾದಂಗೆ ಮದ್ದಾನೆ.
- ಆದರ್ಶ