• ಮನೆ

  ಮನೆಯೆ ಕರ್ಮ ಭೂಮಿ, ಮನೆಯೆಲ್ಲೆ ಮಾರ್ನವಮಿ. ಮನೆಯೆ ನಮ್ಮ ಗರಡಿ, ಮನೆಯ ಹೊಸಿಲೆ ನಮ್ಮ ಗಡಿ. ಕುಶಿ ಹುಡುಕ್ಕಂಡು ಯಾವ ಬೆಟ್ಟಕ್ಕೋಗ್ತಿ, ಮನೆಯಲ್ಲೆ ಬಗ್ನೋಡಿ. ಹೊರಗೋಗಿ ಉಗುಸ್ಕೊಳ್ಳೋದೇನಿದೆ, ಮನೆಯೆ ನಮ್ಮ ಗುಡಿ. ಮನೆಯಲ್ಲೆ ಜೀವನ, ಮನೆಯಲ್ಲೆ ಮಸಣ. ಹೊರಗೋಗಿ ಮಾಡೋದೇನಿದೆ, ಬೆಚ್ಚಗೆ ಮನೆಯಾಗಿರಣ. - ಆದರ್ಶ


 • ನಿಲ್ಲು

  ಗಾಳಿಯೊಡನೆ ಗುದ್ದಾಡಿ ನಿಲ್ಲಲೆ, ಅಥವಾ ಕುಸಿದುಬಿಡಲೆ? ನೀರಲ್ಲಿ ಈಜಿ ತೇಲಲೆ, ಅಥವಾ ದಣಿದು ಮುಳುಗಿಬಿಡಲೇ? ಹೋರಾಟ ದಿನ-ದಿನ ಒಳಗೆ, ಬದುಕು ನಿಲ್ಲದ ಕಾಳಗ ಕೊನೆಗೆ. ಒಳಗಿನದೆಲ್ಲ ಕಕ್ಕಲೆ, ಅಥವಾ ಹೊರಗಿನೊಂದಿಗೆ ಬೆರೆಯಲೆ? ಒಳನೋಟ ಕೊನೆಯಿರದ ಬಯಲು, ಸುಮ್ಮನಾಗದೀ ಒಳಗಿನ ಅಲೆ. ನನ್ನೊಡನೆ ನಾ ಗುದ್ದಾಡಲೆ, ಅಥವಾ ಸುಮ್ಮನಿದ್ದು ಬಿಡಲೇ? ಹೋರಾಟ ಇನ್ನೆಷ್ಟು ದಿನ ಒಳಗೆ, ಬದುಕು ಒಳಗೂ ಹೊರಗಿನ ಕಾಳಗ ಕೊನೆಗೆ. - ಆದರ್ಶ


 • ಅತ್ತ-ಇತ್ತ

  ೧ ಅತ್ತ ಯವ್ವನ ಇತ್ತ ಮುಪ್ಪು, ನಡುವೆ ಇರೋದು ಯಾರ ತಪ್ಪು? ಅತ್ತ ಹೆಂಡತಿ, ಇತ್ತ ಹಳೆ ಹುಡುಗಿ, ನಡುವೆ ಉಳಿದರು, ಹುಡುಗರು ನಡುಗಿ. ಹರಿವ ನೀರು ಹರಿದುಬಿಡಲಿ, ಗೊಂದಲಕೆ ಹುಡುಗ್ರು ಮದುವೆಯಾಗಿಬಿಡ್ಲಿ. ಅತ್ತ ಯವ್ವನ ಇತ್ತ ಮುಪ್ಪು, ನಡುಗಾಲದಿ ಉಳಿಬಾರದು ತಪ್ಪು ಒಪ್ಪು. ೨ ನಮ್ಮಿಬ್ಬರಲಿ ಇಶ್ಟೊಂದು ಹೊಡಿಬಡಿತ, ಒಂದಾಗಲಿಲ್ಲ ನಮ್ಮಿಬ್ಬರ ಎದೆಬಡಿತ. ಚಳಿಗಾಲಕ್ಕೆ ಬಿಡು, ಮಳೆಗಾಲಕೂ ಸೇರಲಿಲ್ಲ, ನಾವಿಬ್ಬರೂ ಒಂದೆ ಗೂಡು. - ಆದರ್ಶ


 • ಶ್ರೋಡಿಂಗರ್ ನ ಬೆಕ್ಕು

  ಸಾವಿರಾರು ವರುಷಗಳ ಮನುಷ್ಯರ ಇತಿಹಾಸದಲ್ಲಿ, ಬಹಳ ವಿಧವಾದ ಜನರು, ಮನಸ್ಸುಗಳು ಬಂದು ಹೋಗಿವೆ. ಬಹಳ ರೀತಿಯ ಯೋಚನೆಯ ಅಲೆಗಳು ಬಂದು ಹೋದಂತೆ, ಬಹಳ ವಿಧವಾದ ಚಳುವಳಿಗಳೂ ಸಹ ನಡೆದಿದ್ದಾವೆ. ಮನುಷ್ಯ ಕಲಿತ, ಮರೆತ, ಮತ್ತೆ ಕಲಿತ. ಈ ಕಲಿಕೆ-ಮರೆವುಗಳ ದಾರಿಯಲ್ಲಿ ಬಹಳ ಜಾಣ ಯೋಚನೆಗಳು, ಕೆಲಸಗಳು ಮೂಡಿ ಬಂದಿದ್ದಾವೆ. ಹಾಗೆಯೇ ಬಹಳ ದಡ್ಡತನ ಅನ್ನಿಸುವಂತ ಕೆಲಸಗಳು, ಯೋಚನೆಗಳು ಹೊರ ಬಂದಿದ್ದಾವೆ. ಈ ದಾರಿಯನ್ನ ಒಟ್ಟಾರೆ ತಿರುಗಿ ನೋಡಿದರೆ ಜನರು ಜಾಣರು...


 • ಗಧಾಯುದ್ಧ

  ಮಹಾಭಾರತದ ಕೊನೆ ದಿನ, ಅವತ್ತಿನ ದಿನ ಭೀಮ, ದುರ್ಯೋಧನನ ಎತ್ಲಿಲ್ಲ ಅಂದ್ರೆ ದ್ರೌಪದಿ ಮನೆ ಒಳಗ್ ಬಿಟ್ಕಳಲ್ಲ ಅಂತ ಹೇಳಿರ್ತಾಳೆ. ಇವ್ನು ಅವನ ತೊಡೆನ ಬಗದು, ಅವನ ರಕ್ತನ ಶಾಂಪೂ ಮಾಡಿ, ನಿನಗೆ ತಲೆ ಸ್ನಾನ ಮಾಡಿಸ್ಲಿಲ್ಲ ಅಂದ್ರೆ, ನಾನು ಊರು ಬಿಟ್ಟು ಓಡೋಗ್ತಿನಿ ಅಂತ ಹೇಳಿರ್ತಾನೆ. ಆ ಕೊನೆ ದಿನ ಬಂದೆ ಬಿಟ್ಟಿದೆ. ಯುದ್ಧ ಮುಗಿದು, ಉಳಿದ ಕೌರವರೆಲ್ಲ ಹೊಗೆ ಹಾಕುಸ್ಕಂಡವ್ರೆ, ಆದ್ರೆ ದುರ್ಯೋಧನ ಮಾತ್ರ ಎಲ್ಲೂ ಕಾಣ್ತಿಲ್ಲ....