ಮನೆಯೆ ಕರ್ಮ ಭೂಮಿ,
ಮನೆಯೆಲ್ಲೆ ಮಾರ್ನವಮಿ.
ಮನೆಯೆ ನಮ್ಮ ಗರಡಿ,
ಮನೆಯ ಹೊಸಿಲೆ ನಮ್ಮ ಗಡಿ.

ಕುಶಿ ಹುಡುಕ್ಕಂಡು ಯಾವ ಬೆಟ್ಟಕ್ಕೋಗ್ತಿ,
ಮನೆಯಲ್ಲೆ ಬಗ್ನೋಡಿ.
ಹೊರಗೋಗಿ ಉಗುಸ್ಕೊಳ್ಳೋದೇನಿದೆ,
ಮನೆಯೆ ನಮ್ಮ ಗುಡಿ.

ಮನೆಯಲ್ಲೆ ಜೀವನ,
ಮನೆಯಲ್ಲೆ ಮಸಣ.
ಹೊರಗೋಗಿ ಮಾಡೋದೇನಿದೆ,
ಬೆಚ್ಚಗೆ ಮನೆಯಾಗಿರಣ.

- ಆದರ್ಶ