ಗಾಳಿಯೊಡನೆ ಗುದ್ದಾಡಿ ನಿಲ್ಲಲೆ,
ಅಥವಾ ಕುಸಿದುಬಿಡಲೆ?
ನೀರಲ್ಲಿ ಈಜಿ ತೇಲಲೆ,
ಅಥವಾ ದಣಿದು ಮುಳುಗಿಬಿಡಲೇ?
ಹೋರಾಟ ದಿನ-ದಿನ ಒಳಗೆ,
ಬದುಕು ನಿಲ್ಲದ ಕಾಳಗ ಕೊನೆಗೆ.

ಒಳಗಿನದೆಲ್ಲ ಕಕ್ಕಲೆ,
ಅಥವಾ ಹೊರಗಿನೊಂದಿಗೆ ಬೆರೆಯಲೆ?
ಒಳನೋಟ ಕೊನೆಯಿರದ ಬಯಲು,
ಸುಮ್ಮನಾಗದೀ ಒಳಗಿನ ಅಲೆ.

ನನ್ನೊಡನೆ ನಾ ಗುದ್ದಾಡಲೆ,
ಅಥವಾ ಸುಮ್ಮನಿದ್ದು ಬಿಡಲೇ?
ಹೋರಾಟ ಇನ್ನೆಷ್ಟು ದಿನ ಒಳಗೆ,
ಬದುಕು ಒಳಗೂ ಹೊರಗಿನ ಕಾಳಗ ಕೊನೆಗೆ.

- ಆದರ್ಶ