ದೀಪ ಹಚ್ಚು ಮನವೆ, ಬೆಳಕು ಹರಿದುಬಿಡಲಿ.
ಚೆಲ್ಲು ಬೆಳಕ ಒಲವೆ, ಮನವು ಕರಗಿಬಿಡಲಿ.
ಮನದಾಳದ ಕತ್ತಲಿಗೆ ಮಸಿಯ ಬಳಿದು,
ಪಸರಿಸಲಿ ಒಳಗೆ, ಭಿನ್ನ ಕಿತ್ತೊಗೆದು.

ನನಗಂತೂ ಒಲವು ಗಗನ ಕುಸುಮ,
ಹೊಂದಿಕೊಳ್ಳಲಿ ಹೇಗೆ?
ಅನುಸರಿಕೆ ಈಗ ನೀರಲ್ಲಿ ಹೋಮ,
ಅಸುನೀಗುವುದೆ ಬೇಗೆ?

ದೀಪ ಹಚ್ಚು ಮನವೆ, ಕಡುನೆನಪು ಕರಗಲಿ,
ಬೆಳಕಿನಡಿಯಲಿ ಇಂದು, ಹೊಸ ದಾರಿ ಕಾಣಲಿ.
ಮನದಾಳದ ಬೆತ್ತಲೆಗೆ ಬೆಳಕ ಚೆಲ್ಲಿ,
ಅರೆಘಳಿಗೆಗಾರು ನಾವು, ನಲಿವ ಇಲ್ಲಿ.

- ಆದರ್ಶ