ಅತ್ತ-ಇತ್ತ
by Adarsha
೧
ಅತ್ತ ಯವ್ವನ ಇತ್ತ ಮುಪ್ಪು,
ನಡುವೆ ಇರೋದು ಯಾರ ತಪ್ಪು?
ಅತ್ತ ಹೆಂಡತಿ, ಇತ್ತ ಹಳೆ ಹುಡುಗಿ,
ನಡುವೆ ಉಳಿದರು, ಹುಡುಗರು ನಡುಗಿ.
ಹರಿವ ನೀರು ಹರಿದುಬಿಡಲಿ,
ಗೊಂದಲಕೆ ಹುಡುಗ್ರು ಮದುವೆಯಾಗಿಬಿಡ್ಲಿ.
ಅತ್ತ ಯವ್ವನ ಇತ್ತ ಮುಪ್ಪು,
ನಡುಗಾಲದಿ ಉಳಿಬಾರದು ತಪ್ಪು ಒಪ್ಪು.
೨
ನಮ್ಮಿಬ್ಬರಲಿ ಇಶ್ಟೊಂದು ಹೊಡಿಬಡಿತ,
ಒಂದಾಗಲಿಲ್ಲ ನಮ್ಮಿಬ್ಬರ ಎದೆಬಡಿತ.
ಚಳಿಗಾಲಕ್ಕೆ ಬಿಡು,
ಮಳೆಗಾಲಕೂ ಸೇರಲಿಲ್ಲ,
ನಾವಿಬ್ಬರೂ ಒಂದೆ ಗೂಡು.
- ಆದರ್ಶ