ಬಾಳು ಒಂದು ದಿನ ಏನೂ ಇರದಂತೆ,
ಬಾಳು ಒಂದು ದಿನ ನೆನ್ನೆ ಉಳಿಯದಂತೆ.
ನಾಳೆಯ ದಾರಿಗೆ ಈ ದಿನದ ಸಂತೆ,
ಬಾಳು ಒಂದು ದಿನ ಹಗುರಾಗುವಂತೆ.

ಬಾಳು ಒಂದು ದಿನ ಯಾರೂ ಇರದಂತೆ,
ಬಾಳು ಒಂದು ದಿನ ನಾಳೆ ಮರೆತಂತೆ.
ಬದಿಗಿಟ್ಟು ಗಳಿಗೆಯ ಎಣಿಕೆಯ ಅಂಕೆ,
ಬಾಳು ಒಂದು ದಿನ ನೀನೇ ಇರದಂತೆ.
ಬಾಳು ಮನವೆ, ಏನೂ ಉಳಿಯದಂತೆ!

-ಆದರ್ಶ