ಅಚ್ಚಕನ್ನಡ
ಕನ್ನಡದ ನಿತ್ಯ ಉತ್ಸವ
-
ಒಳಗೆ
ಹೊರಗೆ ನಗುವು ನುಗ್ಗಿ ಹರಿವ ಶರಾವತಿ, ಒಳಗೆ ನೋವಿನ ಆಳ ಜೋಗದ ಗುಂಡಿ. ಹೊರಗೆ ನಲಿವು ನೆಮ್ಮದಿಯ ನೇತ್ರಾವತಿ, ಒಳಗೊಳಗೆ ನೋವು ಹಿಡಿದೆಳೆವ ಬಂಡಿ. ಎಡಗಡೆಯಿಂದ ಬಾಳು ನಲಿದಾಡುವ ತುಂಗೆ, ಬಲದಿಂದ ಬಾಳು ಬಡಿದಾಡುವ ಭದ್ರೆ, ಎರಡೂ ಹೊಳೆ ಕೂಡುವ ತಾವು, ದಿಕ್ಕು ಯಾವುದು ಇನ್ನು ಮುಂದಕ್ಕೆ ಬಾಳಿಗೆ? ಮಳೆಗಾಲಕೂ ತುಂಬದ ಕಾಳಿಯ ಮಡಿಲು, ಹೆಪ್ಪುಗಟ್ಟದೆ ಮುಂದೋಡಿದೆ ಮನದಾಳದ ಮುಗಿಲು, ಮುಂದಾದರೂ ಕಡಲ ಸೇರುವುದೇ ಈ ಹರಿವು, ಎಣಿಸಿದೆ ದಿನಗಳ...
-
ಮೀಸಲು
ನಾನು ಸಣ್ಣವನಾಗಿದ್ದಾಗ ಬೇಸಿಗೆ ರಜೆಗೆ ನನ್ನಜ್ಜನ ಊರಿಗೆ ಹೋಗಿ ಬರುತ್ತಿದ್ದೆ. ಹೀಗೊಂದು ರಜೆಯ ದಿನ ಊರಲ್ಲಿ, ಮನೆಯ ಹಿತ್ತಲಲ್ಲಿ ನನ್ನಜ್ಜಿಯ ಜೊತೆ ಕೂತಿದ್ದಾಗ "ಅಜ್ಜಿ, ನಿಂಗೆ ಓದೋದು, ಬರೆಯೋದ ಹೇಳಿಕೊಡ್ತೀನಿ ಬಾ" ಅಂತ ಅಂದೆ . ಅಜ್ಜಿ ಇದ್ದೋರು, "ಹೋಗ, ಅದೆಲ್ಲ ನಂಗ್ಯಾತಕ್ಕೆ ಬೇಕು " ಅಂತಂದ್ರು . ನಾನು ಇನ್ನೊಂದೆರಡು ಸರಿ ಕೇಳಿ ‘ಬ್ಯಾಡ’ ಅಂತಂದಾಗ ಸುಮ್ಮನಾಗಿದ್ದೆ . ನಾನು ಪಿಯುಸಿ ಮುಗಿಸಿ ಎಂಜಿನೀಯರಿಂಗ್ ಸೇರುವಾಗ ಕೆಟಗರಿ ಮೀಸಲಾತಿ...
-
ಬಾಳು
ಬಾಳು ಒಂದು ದಿನ ಏನೂ ಇರದಂತೆ, ಬಾಳು ಒಂದು ದಿನ ನೆನ್ನೆ ಉಳಿಯದಂತೆ. ನಾಳೆಯ ದಾರಿಗೆ ಈ ದಿನದ ಸಂತೆ, ಬಾಳು ಒಂದು ದಿನ ಹಗುರಾಗುವಂತೆ. ಬಾಳು ಒಂದು ದಿನ ಯಾರೂ ಇರದಂತೆ, ಬಾಳು ಒಂದು ದಿನ ನಾಳೆ ಮರೆತಂತೆ. ಬದಿಗಿಟ್ಟು ಗಳಿಗೆಯ ಎಣಿಕೆಯ ಅಂಕೆ, ಬಾಳು ಒಂದು ದಿನ ನೀನೇ ಇರದಂತೆ. ಬಾಳು ಮನವೆ, ಏನೂ ಉಳಿಯದಂತೆ! -ಆದರ್ಶ
-
ಯಾರು ತಿಳಿಯರು!
ಇವತ್ ಆಫಿಸಿಂದ ಮನೆಗೆ ಬರ್ತಿದ್ದೆ. ದಾರಿಲಿ ಜನ ಮರದಡಿ ನಿಂತು ಬೀಳೊ ಮಾವಿನಕಾಯಿ ಆರಿಸ್ಕೊತಿದ್ರು. ನಾನು ಮಂಗನಂಗೆ "ನನ್ನ ಮೇಲೆ ಏನೂ ಬೀಳಲ್ಲ" ಅಂತ ಅಂದುಕೊಂಡು, ಅದೇ ಮರದ ಕೆಳಗೆ ಬೈಕಲ್ಲಿ ಹೋದೆ. ನೋಡಿದ್ರೆ ಮೇಲಿಂದ ಮಾವಿನಕಾಯಿ ಬಂದು ರಪ್ ಅಂತ ನನ್ನ ಕೈಗೆ ಹೊಡಿತು. ನಾನು ಬೈಕ್ ನಿಲ್ಸಿ ಸಿಟ್ಟಲ್ಲಿ ತಿರುಗಿ, "ಯಾರು ತಿಳಿಯರು ನನ್ನ, ಭುಜಬಲದ ಪರಾಕ್ರಮ?" ಅಂತ, ಯಾರಮೇಲೆ ರೇಗಾಡಬೇಕು ಅಂತ ನೋಡ್ತಿದ್ದೆ. 'ಕೆಳಗಿರೋರು ನಗ್ತಾ...
-
ತೇಜಸ್ವಿ ಮನೆ
ಅದು ೨೦೧೬ನೇ ಇಸವಿ. ಕಾಲೇಜು ಮುಗಿದು ಮೂರು ವರುಷಗಳಾಗುತ್ತಿದ್ದ ಕಾಲ. ಆ ವರುಷದ ಬೇಸಿಗೆ ಬಹಳ ಬಿರುಸಾಗಿತ್ತು. ಇಡೀ ಬೇಸಿಗೆಯಲ್ಲಿ ಹೊರಗೆಲ್ಲೂ ಅಡ್ಡಾಡೋಕೆ ಹೋಗದೆ, ಬರೀ ಮನೆ, ಕೆಲಸ ಇಷ್ಟರಲ್ಲೇ ಇತ್ತು. ಅಂತೂ ಬೇಸಿಗೆ ಮುಗಿಯುವ ಹೊತ್ತಿಗೆ, ಗೆಳೆಯರೆಲ್ಲ ಮನಸ್ಸು ಮಾಡಿ, ಎತ್ತ ಕಡೆಯಾದರೂ ತಿರುಗಾಡೋಕೆ ಹೋಗೋಣ ಎಂದು, ಒಂದು ಶುಕ್ರವಾರದ ರಾತ್ರಿ ಊರು ಬಿಟ್ಟು ಹೊರಟೆವು. ಒಂಬತ್ತು ಗಂಟೆ ಬೆಂಗಳೂರ ಬಿಟ್ಟಾಗ, ಸಕಲೇಶಪುರ ತಲುಪಿದಾಗ ನಡುರಾತ್ರಿ ಮೂರು ಗಂಟೆ...