• ನನ್ನ ಅಂತ್ಯ

  ಅನುದಿನದ ಹುಡುಕಾಟಕ್ಕೆ ಕೊನೆ ನನ್ನ ಅಂತ್ಯ ಅನುಗಾಲದ ಬೇಡಿಕೆಯ ಈಡೇರಿಸುವ ಅಂತ್ಯ ಸಾಗುವ ನದಿಯು ಸೇರುವ ಅಂತ್ಯ ಕಾಣದ ದಾರಿಯ ಪಯಣದ ಅಂತ್ಯ ಸೊಗಸಾದ ಭಾವನೆಗೆ ಪ್ರೇರಣೆ ಅಂತ್ಯ ಹಿತವಾದ ಹೂಕನಸ ಧೋರಣೆ ಅಂತ್ಯ ಮರುಗುವ ಜೀವಕೆ ಮುದ ತರಿಸುವ ಅಂತ್ಯ ಮರಣ ಸನಿಹದಲು ಬದುಕ ತೋರಿಸುವ ಅಂತ್ಯ ನನ್ನೆಲ್ಲ ಏಕಾಂತಕ್ಕೆ ಕೊನೆ ನನ್ನ ಅಂತ್ಯ ನನ್ನೆಲ್ಲ ಹುಡುಕಾಟವೇ ನೀ ನನ್ನ ಅಂತ್ಯ, ನನ್ನ ಅಂತ್ಯ! - ಆದರ್ಶ ಈ...


 • ಕೊಟ್ಟಿದ್ದನ್ನ ಬಿಟ್ಟು ಬಿಡಬೇಕು

  ನೀವು ದೊಡ್ಡ ಬೆಟ್ಟದ ಮುಂದೆ ನಿಂತುಕೊಂಡಿರ್ತಿರ. ಬೆಟ್ಟ ಹತ್ತುವ ಆಸೆ ನಿಮಗೆ ಇರೋದಿಲ್ಲ. ಬೆಟ್ಟ ಹತ್ತುವುದು ಕೂಡ ಒಂದು ಆಸೆ ಅಂತ ನಿಮಗೆ ಗೊತ್ತಿರೋದಿಲ್ಲ. ಅಂಥಾದ್ರಲ್ಲಿ ಯಾರೋ ಒಬ್ಬ ಬರುತ್ತಾನೆ. ನಿಮಗೆ ಬೆಟ್ಟ ಹತ್ತುವ ಆಸೆ ತುಂಬುತ್ತಾನೆ. ಆತನೇ ನಿಮಗೆ ಸಹಾಯ ಮಾಡಿ ಬೆಟ್ಟ ಹತ್ತಲು ಕಾರಣನಾಗುತ್ತನೆ, ನೀವು ಬೆಟ್ಟ ಹತ್ತಿ ಇನ್ನೇನು ಎರಡು ಕೈ ಎತ್ತಿ ಕೂಗುವಷ್ಟರಲ್ಲಿ, ನಿಮಗೆ ಬೆಟ್ಟ ಹತ್ತಲು ಸಹಾಯ ಮಾಡಿದ ವ್ಯಕ್ತಿ ಹಿಂದಿಂದ ನಿಮ್ಮನು...


 • ಸೂರ್ಯಾಸ್ತಮಾನ

  ಮಧ್ಯಾಹ್ನ ಊಟ ಮಾಡಿ ತೀರ್ಥಹಳ್ಳಿಯಿಂದ ಹೊರಟಾಗ ಸುಮಾರು ಒಂದು ಘಂಟೆ ಆಗಿತ್ತು. ಜನರನ್ನು ದಾರಿ ಕೇಳಿ ಒಂದಷ್ಟು ದೂರ ನಡೆದು ದಾರಿಯಲ್ಲಿ ಬಂದ ಲಾರಿಯನ್ನು ಹತ್ತಿ ಮತ್ತಷ್ಟು ದೂರ ಬಂದು, ಇಳಿದು, ಮತ್ತೆ ನಡೆಯುತ್ತಾ ಹೋಗುವಾಗ ಸಿಕ್ಕ ಆಟೋ ಹತ್ತಿ ಆಗುಂಬೆ ತಲುಪಿದಾಗ ಮಧ್ಯಾಹ್ನ ಸುಮಾರು ಎರೆಡೂವರೆ ಆಗಿತ್ತು. ಆಗುಂಬೆಯಲ್ಲಿ ನನ್ನ ಮೊದಲ ಅನುಭವ ಶಾಂತಿ ಹಾಗು ಮೌನ ಆಗೊಮ್ಮೆ ಈಗೊಮ್ಮೆ ಎಂಬಂತೆ ಆ ಊರಿನ ಜನರ ಒಡನಾಟ ಕಾಣುತ್ತಿತ್ತು....


 • ಆರಂಭ

  ಓದುಗರು ಇದ್ದಾರೆಂದು ನಾವು ಬರೆಯಲು ಶುರು ಮಾಡಲಿಲ್ಲ. ಬರಿಬೇಕು ಅನ್ನಿಸ್ತು ಬರೆದ್ವಿ. ಆಮೇಲೆ ಓದುಗರು ಬೇಕು ಅನ್ನಿಸ್ತು. ಇದ್ದ ಗೆಳೆಯರನ್ನು ಹುಡುಕಿಕೊಂಡು ಹೋಗಿ ಪಟ್ಟು ಹಿಡಿದು ಕೂರಿಸಿ ಓದೋಕೆ ಕೊಟ್ಟೆವು. ಕೆಲವರು ಚೆನ್ನಾಗಿದೆ ಅಂದರೆ ಇನ್ನು ಕೆಲವರು “ಇನ್ನು ಮುಂದೆ ಇಂಥಾದ್ದೆಲ್ಲಾ ತಂದು ಓದು ಅಂದ್ರೆ ಚೆನ್ನಾಗಿರಲ್ಲ” ಅಂತ ಬಯ್ಯೋರು. ಯಾವ ಬೈಗುಳಗಳೂ ನಮ್ಮನ್ನ ಬರವಣಿಗೆಯಿಂದ ದೂರ ತಳ್ಳಲಿಲ್ಲ. ಬರೆಯೋದು ನಮ್ಮ ಇಷ್ಟದ ಕೆಲಸ, ಬರಿತಾನೇ ಇರ್ತಿವಿ. ಓದೋದು ಓದುಗರ...