ಎಸಿ ಅಡಿಯಲ್ಲಿ ಕುಂತವನಿಗೇನು ಗೊತ್ತು ಬಿಸಿ ಶಾಖ
ಬಿಸಿ ಮುಟ್ಟದು ಮನುಜನಿಗೆ ಅಂಡು ಸುಡುವ ತನಕ,
ಸುತ್ತೆಲ್ಲ ಮರಗಳು ಬೇಗೆಯಲಿ ಬಸವಳಿದಿವೆ
ಆದರ್ಶಗಳೆಲ್ಲ ಮಾನವನ ಕಿಸೆಯಲ್ಲೆ ಹೊರ ಬಾರದೆ ಉಳಿದಿವೆ,
ಆಡುವ ಮಾತಲ್ಲಿ ಎಲ್ಲರೂ ಧೀರರೇ,
ಸರಿ ಸಮಯ ಬಂದಾಗ ಮರ ಬೆಳೆಸಲು ಯಾರಾದರು ಬಂದರೆ?
ಕುಡಿಯುವ ನೀರಿಲ್ಲದಾಗ ಕಾಡುವ ಅರಿಕೆಯು ಭೀಕರ
ಬದುಕುವ ಕಷ್ಟ ನೀಡದೆ ಇಂದು ಸಾವು ತೋರುತಿದೆ ಮಮಕಾರ,
ಎಸಿ ಅಡಿಯಲ್ಲಿ ಕುಂತವನಿಗೇನು ಗೊತ್ತು ಬರಗಾಲದ ಶಾಖ
ಬಿಸಿ ಮುಟ್ಟದು ಮನುಜನಿಗೆ ಅಂಡು ಸುಡುವ ತನಕ!

-ಆದರ್ಶ