ನೂರಾರು ಮನೆಗಳು, ನೂರಾರು ಮನಗಳು
ಒಂದೊಂದು ಮನೆಯಲ್ಲೂ ಒಂದೊಂದು ರೀತಿಗಳು
ನೂರಾರು ದೇಶಗಳು, ನೂರಾರು ಭಾಷೆಗಳು
ಒಂದೊಂದು ದೇಶದಲ್ಲೂ ಒಂದೊಂದು ನೀತಿಗಳು;
ನೂರಾರು ಮನೆ, ನೂರಾರು ಮನ
ನೂರಾರು ದೇಶ, ನೂರಾರು ಭಾಷೆ
ಎಲ್ಲಕ್ಕೂ ಇರುವುದು ಒಂದೇ ಭೂಮಿ!
ಗೆರೆ ಎಳೆದು ಬೇರಾಗಿ ಭೂಮಿ ಒಡೆಯಬೇಕೆ?
ಜೊತೆಯಾಗಿ ಹೊಡೆದಾಡಿ ದೂರಾಗಬೇಕೆ?
ಯುದ್ಧದಿ ಶಾಂತಿಯ ಬಯಕೆ ಯಾಕೆ?
ಸಮಾಧಿಯ ಮೇಲೆ ಹೂದೋಟ ಬೇಕೆ?

– ಆದರ್ಶ