• ತಿಳಿ ನೀಲಿ ಆಗಸ

    ಎಲ್ಲರೂ ಇದ್ದು ಒಂಟಿಯಾಗುವ ಚಂದಕೆ ಬಂಧಗಳನು ಬೆಳೆಸಬೇಕೆ ನನ್ನೊಡನೇಯೆ ಬಾಳುವ ನನಗೆ ಈಗ ಒಂಟಿಯಾಗುವ ಬಯಕೆ, ತಿಳಿನೀಲಿ ಆಗಸದಿ ಹಾರುವ ಒಂಟಿ ಹಕ್ಕಿಯಂತೆ ಈಗ ನಾನು ನನ್ನೆತ್ತರಕೆ ತಾನು ಹಾರಲಾಗದೆಂದು ಸುಮ್ಮನೆ ತೇಲಾಡುತಿದೆ ಬಾನು, ಕೈ ಚಾಚಿ ನಿಂತ ಜನರಿಗೆ ನಾನು ಸಿಗಲಾರದ ದಿಗಂತ ನನ್ನನೇ ದೂಡುತ ಸೇರಿರುವೇ ಈಗ ಯಾರಿಗೂ ಸಿಗದ ಹಂತ, ತಿಳಿನೀಲಿ ಆಗಸದಿ ಹಾರುತಿರುವ ಹಕ್ಕಿ ಈಗ ನಾನು ಯಾರ ಕೈಗೂ ಸಿಗದಂತೆ ಹಾರಾಡುವೆನು! –...


  • ಮರೆತ ಕನಸು

    ಯಾರ ದಾರಿಯ ಹೆಜ್ಜೆ ಗುರುತಿದು ನಾನು ನೋಡುತ ಸಾಗಿರುವೆ ನನ್ನ ಹೆಜ್ಜೆಯ ಪಥವೆ ಇಂದು ನನಗೆ ತಿಳಿಯದೆ ಬದಲಾಗಿವೆ, ದಾರಿಯ ಕೊರೆಯುತ ಸಾಗುವ ಧೈರ್ಯವು ಎತ್ತ ಹೋಯಿತೋ ಏನೊ ಕಾಣದೂರಿನ ಕನಸ ಕಾಣುವ ಇಂಗಿತವೀಗ ಇಲ್ಲವಾಯಿತೇನು, ಅನ್ಯರು ತೋರುವ ಹಾದಿಯಲ್ಲಿ ಇಂದು ಬಾರದಾಗಿದೆ ಸೊಗಸು ಮತ್ತೆ ಇಂದು ನೆನಪಾಗಿದೆ ನನಗೆ ನಾ ಎಂದೋ ಕಂಡ ಕನಸು! -ಆದರ್ಶ


  • ಮೂರು ಮುತ್ತುಗಳು

    ಗುರಿ ಸೇರುವ ತವಕದಲಿ ಗೋರಿ ಕಟ್ಟಿಕೊಂಡಿರುವವರು ನಾವು, ಗುರಿಯು ಕೂಡ ಸತ್ತು ಬಿದ್ದಿದೆ ಪಕ್ಕದ ಗುಂಡಿಯಲಿ, ಮಣ್ಣು ಹಾಕೋನು ದೇವರು. – ದೀಪಕ್ ಬಸ್ರೂರು ಮರೆಯಬೇಕೆಂದರೂ ಮರೆಯಲಾಗದ ನಿನ್ನ ನೆನಪು ಬಿಡದೆ ಕಾಡಿದೆ ಎನ್ನ, ಭಾವನೆಗಳ ಆರ್ಭಟಕೆ ಸಿಲುಕಿ ನಲುಗಿಹೆನು ನಾನು, ಮತ್ತೆಂದೂ ಸಿಗದಿರು ಬಾಳ ಪಯಣದಲಿ, ಮುಗಿಸುವಾಮುನ್ನ ಈ ನನ್ನ ಪಯಣಗಳಲ್ಲಿ. ನಿನ್ನ ಜೊತೆಗೆ ಪಯಣ ಸೇರಿದ ದಾರಿ ಇಂದು ಮೋಹಕ, ನಿನ್ನ ನೆನಪ ನಾನು ಸೇರಿ ಬದುಕು...


  • ಬಯ್ಯೋದಿದ್ರೆ ಅಚ್ಚಕನ್ನಡದಲ್ಲೇ ಬಯ್ದುಬಿಡ್ರಿ…!

    ಇಲ್ಲಿರುವ ಮೂರು ಕಥೆಗಳಿಗೆ ನನ್ನ ಥರಾನೇ ತಲೆ, ಬುಡ ಎರಡೂ ಇಲ್ಲ. ಆದರೂ ನೀವೊಮ್ಮೆ ಓದಬಹುದು. ಅಕಸ್ಮಾತ್ ಓದಿ ನನ್ನನ್ನ ಬೈಬೇಕೆನಿಸಿದರೆ ಅಚ್ಚಕನ್ನಡದಲ್ಲಿ ಬೈದುಬಿಡಿ. ಅಲ್ಲೆಲ್ಲೋ ಅವನ ಫೋನು ನಂಬರ್ ಅವಳ ಕಣ್ಣಿಗೆ ಬಿತ್ತು. ಆಶ್ಚರ್ಯ ಅಂದ್ರೆ ಆ ನಂಬರ್ ನೋಡಿದ ಕೂಡಲೇ ಅವಳಿಗೆ ಅವನ ಮೇಲೆ ಪ್ರೀತಿ ಆಗೋಗತ್ತೆ. ಅವಳು ಅವನಿಗೆ ಫೋನ್ ಮಾಡಿ “ನಿಮ್ಮ ಫೋನ್ ನಂಬರ್ ನೋಡಿದ ಕೂಡಲೇ ನನಗೆ ನಿಮ್ಮ ಮೇಲೆ ಪ್ರೀತಿ ಆಗೋಯ್ತು,...


  • ಹಸಿವು ಹಾಗು ಸಭ್ಯಸ್ಥರು

    ಮೊನ್ನೆ ಹೀಗೆ ಒಂದು ಸಣ್ಣ ಮಟ್ಟದ ಕಂಪನಿಯ ಅದಕ್ಕಿಂತ ದೊಡ್ಡ ಮಟ್ಟದ ಕಂಪನಿಯು ಸಾಕಷ್ಟು ಹಣ ನೀಡಿ ಕೊಂಡಿತ್ತು, ಕೊಂಡದ್ದಕ್ಕೆ ದೊಡ್ಡ ಕಂಪನಿಯು ಸುಮ್ಮನಿರಲಾದೀತೆ? ತನ್ನ ಶಕ್ತಿ ಪ್ರದರ್ಶನವನ್ನು ತನ್ನ ಅಂತಸ್ತಿನ ಮಟ್ಟಕ್ಕೆ ನಡೆಸಿತು! ಸಣ್ಣ ಕಂಪನಿಯ ಹೆಸರನ್ನ ಇತಿಹಾಸದ ಪುಟಗಳಿಂದ ಅಳಿಸೋಕೆ ಬೇಕಾದ ಎಲ್ಲ ಭರ್ಜರಿ ತಯಾರಿಯನ್ನು ನಡೆಸಿ, ಸಣ್ಣ ಕಂಪನಿಯ ಹೊಸಕಿದ ಸಂತಸಕ್ಕೆ ತನ್ನ ಕಂಪನಿ ಹಾಗು ತನ್ನ ಹೊಸದಾಗಿ ಕೊಂಡ ಸಣ್ಣ ಕಂಪನಿ, ಎಲ್ಲ ಜನರ...