• ಆಕರ್ಷಣೆ

  ಇರುಳನು ತಳ್ಳಲು ಬೆಳಕಿದು ಸೋತಿದೆ ಭುವಿಯನು ತೊರೆಯದೆ ಬಾನಿದೂ ಬಾಗಿದೆ ಆಕರ್ಷಣೆ ಏನಿದ್ದರೂ ನಿನ್ನದೇ ಈಗೀಗ ಮೋಡವೂ ತಾನು ಕರಗಿ ಇಳಿದು ಬಂದಿದೆ ನಿನ್ನನು ಕಂಡಾಗ! ಮೋಡವು ಈಗ ತೇಲಲು ಮರೆತಿದೆ ಸಮಯವೂ ಚಲಿಸದೆ ಸುತ್ತುಲೂ ನಿಂತಿದೆ ಆಕರ್ಷಣೆ ಏನಿದ್ದರೂ ನಿನ್ನದೇ ಈಗೀಗ ಗಾಳಿಗೆ ಈಗ ಭುವಿಯೇ ಮನೆಯು ನಿನ್ನನು ಸೋಕಿ ನಿಂತಾಗ! ಅರಳುತ ಹೂವು ಅರ್ಪಣೆ ನೀಡಿದೆ ಬೆರಗಲಿ ಬೆಳಗು ಮಂತ್ರವ ಪಠಿಸಿದೆ ಆಕರ್ಷಣೆ ಏನಿದ್ದರೂ ನಿನ್ನದೇ ಈಗೀಗ...


 • ಸಾಮಾನ್ಯ ಕನ್ನಡಿಗ

  ಮಲಗಿದ್ದ ಜನರ ಬಡಿದೇಳಿಸುವನು ಸಾಮಾನ್ಯ ಕನ್ನಡಿಗನು ಛಲವಾದಿ, ಹಠವಾದಿ ಹೊಸ ಲೋಕದ ಪ್ರವಾದಿ ಸಾಮಾನ್ಯ ಕನ್ನಡಿಗನು! ಅನ್ಯರ ಕೈ ಹಿಡಿದು ತನ್ನವರ ಮೇಲೆತ್ತುವನು ಸಾಮಾನ್ಯ ಕನ್ನಡಿಗನು ಅನುರಾಗಿ ಅಣಿಯಾಗಿ ಕ್ರಾಂತಿಗೆ ಎಲುಬಾಗುವನು ಸಾಮಾನ್ಯ ಕನ್ನಡಿಗನು! ಪ್ರತಿ ಮನೆಯಲ್ಲಿ ಪ್ರತಿ ಮನಸ್ಸಲ್ಲಿ ಉದಯವಾಗುವನು ಶಿವನು, ಮತ್ತೊಮ್ಮೆ ಎಲ್ಲೆಡೆ ಬಾರಿಸುವ ಕನ್ನಡ ಡಿಂಡಿಮವ ಸಾಮಾನ್ಯ ಕನ್ನಡಿಗನು! - ಆದರ್ಶ


 • ಮನಸ್ಸೇ ನೀ ನನ್ನ ಹಿತಶತ್ರು

  ನನ್ನೊಳಗೇ ಅವಿತಿಹ ನನ್ನನ್ನೇ ಹಿಡಿದಿಹ ನನ್ನ ಮನಸ್ಸೇ ನೀ ನನ್ನ ಹಿತಶತ್ರು ನನ್ನೆಲ್ಲ ಆಸೆಗೆ ನನ್ನೆಲ್ಲ ನಿರಾಸಗೆ ಇಂದು ನೀನಾಗಿಹೆ ಕತೃ, ಮುಗಿಲೆತ್ತರವ ತೋರುವೆ ಕಡಲಾಳಕೆ ನೂಕುವೆ ಹೀಗಿರುವ ನೀ ನನಗೆ ಏಕಾಂತದಲಿ ವರವೆ? ನೀ ಅಳಿಸುವೆ ನೀ ನಗಿಸುವೆ ನಿನ್ನ ನಂಬುವುದಾದರು ಹೇಗೆ ನನ್ನ ಹೀಗೆ ಆಲುಗಾಡಿಸುವ ನೀ ಇರಬೇಕೆ ನನ್ನ ಒಳಗೆ? ಮನಸ್ಸೇ ನೀ ನನ್ನ ಹಿತಶತ್ರು ನಿನ್ನ ಗೆಳೆತನ ನನಗೆ ಸಾಕು ನೀನಾಗೆ ದಯಮಾಡಿ ಈ...


 • ಜೀವನ ಕಥೆಯಷ್ಟು ಈಜಿಯಾಗಿರಬಾರದಿತ್ತ, ಸ್ಪೀಡಾಗಿರಬಾರದಿತ್ತ!

  ಒಂದೊಳ್ಳೆ ಕಥೆ. ಓದಿದ ನಂತರ ಒಂದು ಪಾತ್ರ ಹಾಗೆ ಮನಸ್ಸಿನಲ್ಲಿ ಉಳಿದುಬಿಡುತ್ತದೆ. ಮಹಾಭಾರತವನ್ನೇ ತೆಗೆದುಕೊಳ್ಳಿ. ಒಬ್ಬರಿಗೆ ಕೃಷ್ಣ ಇಷ್ಟ ಆದರೆ ಇನ್ನೊಬ್ಬರಿಗೆ ಭೀಮ, ಮತ್ತೊಬ್ಬರಿಗೆ ಅರ್ಜುನ. ಇನ್ನು ನನ್ನಂಥವರಿಗೆ ದುರ್ಯೋಧನ. ಹೀಗೆ ಆ ಪಾತ್ರ ಪಟ್ಟ ಕಷ್ಟ, ಬದುಕಿದ ಖುಷಿಯ ರೀತಿ, ಮಾಡಿದ ಸಾಧನೆಯೊಂದು ಮನಸ್ಸಿನ ಯಾವುದೊ ಮೂಲೆಯಲ್ಲಿ ಕೂತು ಯೋಚನೆಗೆ ತಳ್ಳುತ್ತದೆ. ”ಛೆ.. ಎಂಥಹ ಪಾತ್ರ!!!. ಎಂದು ಉದ್ಗಾರ ತೆಗೆದುಕೊಳ್ಳುವಂತೆ ಮಾಡುತ್ತದೆ. ಆ ಪಾತ್ರ ಕಥೆಯಲ್ಲಿ ಗೆಲ್ಲಲಿ ಬಿಡಲಿ...


 • ಗೆಲ್ಲೋದ್ರಲ್ಲಿ ಏನಿದೆ ರೀ? ಇರೋದೆಲ್ಲ ಸೋಲೋದ್ರಲ್ಲೇ!!

  ಗೆಲುವೆಂದರೆ ಅಷ್ಟೇ.. ಅದೊಂದು ನಿಂತ ನೀರು. ಹೆಚ್ಚೆಂದರೆ ಗೆದ್ದೆವು ಎನ್ನುವ ನಿಟ್ಟುಸಿರು, ನಾಲ್ಕು ಜನಗಳ ಹೊಗಳಿಕೆ. ಮೂರ್ನಾಲ್ಕು ದಿನಗಳಾದ ಮೇಲೆ ನೀವು ಗೆದ್ದ ಮೂಡಿನಲ್ಲಿ ಯಾರಾದರು ಮುಂದೆ ಹೋದರೆ “ಓವರ್ ಆಗಿ ಬಿಲ್ಡ್ ಅಪ್ ಕೊಡಬೇಡ, ಅಮಿಕೊಂಡು ಸೈಡಿಗ್ ಹೋಗಪ್ಪ!” ಅಂತ ಮುಖಕ್ಕೆ ಉಗಿಯುತ್ತಾರೆ, ಅಂದರೆ ನೀವು ಸತ್ತವರಷ್ಟೇ ಅಪ್ರಸ್ತುತ. ಸಾಧಿಸಿದ್ದು ಆಯ್ತು ಅಂದ ಮೇಲೆ ಮುಂದೆ ಏನಿದೆ? ನಿಮ್ಮ ಕ್ರಿಯಾಶೀಲತೆ ಕೊನೆಗೊಂಡಂತೆ. ಆದರೆ ಸೋಲು ಎಂದರೆ ಹರಿಯುವ ನೀರಿದ್ದಂತೆ....