• ಜೀವನದಿ

  ಯುಗಗಳ ಹಿಂದೆ ಬೆಂಕಿ ಉಂಡೆಯಂಥಹ ಭೂಮಿಯೂ ತನ್ನ ಮೇಲ್ಮೈ ಬೆಂಕಿಯೆಲ್ಲ ಉರಿದ ನಂತರ ಸಾವಿರಾರು ವರ್ಷಗಳ ಕಾಲ ಮಳೆ ರೂಪದಲ್ಲಿ ಬಿದ್ದ ನೀರಿಂದ ತಣಿದು ಇಂದು ನಾವು ನೋಡುತ್ತಿರುವ ಜಗತ್ತಾಗಿದೆ. ಆಗ ಸಾವಿರಾರು ವರ್ಷಗಳು ಬಿದ್ದ ಮಳೆಯಿಂದ ಈಗ ನಾವು ನೋಡುತ್ತಿರುವ ಸಾಗರ, ನದಿಗಳು ಹುಟ್ಟಿಕೊಂಡವು. ಹೀಗೆ ರೂಪುಗೊಂಡ ನೀರಿನ ಜೀವ ನೀಡುವ ಅಂಶದಿಂದ ಎಲ್ಲ ರೀತಿಯ ಜೀವಗಳು ಬೆಳೆದವು. ನಾವು ಸಹ ಬೆಳೆದದ್ದು ಇದೇ ರೀತಿಯಲ್ಲೇ. ನದಿ, ಸಾಗರ,...


 • ಜಗದೋಟ

  ಜಗವೇ ಹಣದ ಹಿಂದೆ ಓಡುತಿರುವಾಗ ನದಿ ಇದು ಓಡಿದೆ ನೋಡು ಸಾಗರವ ಸೇರಿ ಹಿರಿದಾಗಲು, ಓಡಿದೆ ತಾನು ಜಗತ್ತನ್ನೇ ನೋಡಲು. ಜಗವೇ ಹಣದ ಹಿಂದೆ ಓಡುತಿರುವಾಗ ಗಾಳಿ ಇದು ಓಡಿದೆ ನೋಡು ಜಗತ್ತನ್ನೇ ಆವರಿಸಲು, ಓಡಿದೆ ತಾನು ಪ್ರತಿ ಜೀವವನ್ನು ಉಳಿಸಲು. ಜಗವೇ ಹಣದ ಹಿಂದೆ ಓಡುತಿರುವಾಗ ಬೆಳಕಿದು ಓಡಿದೆ ನೋಡು ಜಗದ ಚಿತ್ರವ ಬಿಡಿಸಲು, ಓಡಿದೆ ತಾನು ಎಲ್ಲದರ ಕಣ್ಣ ಬೆಳಗಿಸಲು. ಜಗವೇ ಹಣದ ಹಿಂದೆ ಓಡುತಿರುವಾಗ ಮನವಿದು...


 • ನಗು ಮುಖ

  ನಗುತಿರುವ ಮೊಗದ ಹಿಂದೆ ಸಾಗುತಿರುವುದು ನೋವಿನ ಮೆರವಣಿಗೆ ವಿಧಿಯೇಕೆ ನಿಲ್ಲಿಸದೆ ನೀನು ನಡೆಸುತಿರುವೆ ನಿನ್ನ ಬರವಣಿಗೆ ಊಹಿಸಲೇ ಆಗದು ನಮಗೆ ಮುಂದಿನ ಹೆಜ್ಜೆಯ ಸಪ್ಪಳವ ಸ್ಬಲ್ಪವಾದರೂ ತಗ್ಗಿಸು ನಮ್ಮ ಮೇಲೆ ಆಗುವ ನಿನ್ನ ಕ್ರೂರ ಪ್ರಭಾವ ಆಗಾಗ ಬಂದು ಕಿರುಕುಳ ಕೊಟ್ಟು ಹೋಗುತ್ತಿದ್ದರೂ ನೋವು ನಗುತಲೇ ನೋವುಗಳ ಮರೆಸುತಿಹುದು ನಮ್ಮ ಮೊಗವು, ಈ ನಮ್ಮ ಮೊಗವು! – ಆದರ್ಶ


 • ಬದಲಾಗುತ್ತಿರುವ ಜಗತ್ತಿನಲ್ಲಿ

  ಕೆಲವು ವರ್ಷಗಳ ಹಿಂದೆ ಹೀಗಿರಲಿಲ್ಲ.. ಬದಲಾಗುತ್ತಿರುವ ಜಗತ್ತಿನಲ್ಲಿ ಬದಲಾವಣೆ ಅನಿವಾರ್ಯ ನಿಜ ಆದರೆ, ಈ ಹಂತಕ್ಕಲ್ಲ. ಮನುಷ್ಯ ಸಂಘಜೀವಿ, ಒಂಟಿಯಾಗಿ ಬಾಳುವುದು ಕಷ್ಟಸಾಧ್ಯ ಎಂಬ ಮಾತೊಂದಿತ್ತು. ಆ ಮಾತಿಗೆ ವಾಸ್ತವದಲ್ಲಿ ಅರ್ಥವಿಲ್ಲದಂತಾಗಿದೆ. ತಂತ್ರಜ್ಞಾನ ಮುಂದುವರಿದಂತೆಲ್ಲಾ ಸಂಬಂಧಗಳು ಸಡಿಲಾಗಿ ವಸ್ತುಗಳನ್ನು ಅತಿಯಾಗಿ ಪ್ರೀತಿಸಿ, ಪ್ರೀತಿಸಬೇಕಾದ ವ್ಯಕ್ತಿಯನ್ನು ವಸ್ತುವಿನಹಾಗೆ ಉಪಯೋಗಿಸುವ ಕಾಲಕ್ಕೆ ನಾವೆಲ್ಲ ಸಾಕ್ಷಿಯಾದಂತಿದೆ. ಬಾಲ್ಯದ ಆ ದಿನಗಳು ಕೇವಲ ನೆನಪುಗಳಷ್ಟೆ… ಮುಗ್ಧತೆ, ಅನ್ಯೋನ್ಯತೆ, ಎಲ್ಲರೂ ನಮ್ಮವರೆಂಬ ಭಾವ ಕೇವಲ ನೆನಪಷ್ಟೆ… ಬಾಲ್ಯದ...


 • ಆಕರ್ಷಣೆ

  ಇರುಳನು ತಳ್ಳಲು ಬೆಳಕಿದು ಸೋತಿದೆ ಭುವಿಯನು ತೊರೆಯದೆ ಬಾನಿದೂ ಬಾಗಿದೆ ಆಕರ್ಷಣೆ ಏನಿದ್ದರೂ ನಿನ್ನದೇ ಈಗೀಗ ಮೋಡವೂ ತಾನು ಕರಗಿ ಇಳಿದು ಬಂದಿದೆ ನಿನ್ನನು ಕಂಡಾಗ! ಮೋಡವು ಈಗ ತೇಲಲು ಮರೆತಿದೆ ಸಮಯವೂ ಚಲಿಸದೆ ಸುತ್ತುಲೂ ನಿಂತಿದೆ ಆಕರ್ಷಣೆ ಏನಿದ್ದರೂ ನಿನ್ನದೇ ಈಗೀಗ ಗಾಳಿಗೆ ಈಗ ಭುವಿಯೇ ಮನೆಯು ನಿನ್ನನು ಸೋಕಿ ನಿಂತಾಗ! ಅರಳುತ ಹೂವು ಅರ್ಪಣೆ ನೀಡಿದೆ ಬೆರಗಲಿ ಬೆಳಗು ಮಂತ್ರವ ಪಠಿಸಿದೆ ಆಕರ್ಷಣೆ ಏನಿದ್ದರೂ ನಿನ್ನದೇ ಈಗೀಗ...