ಅಲಂಕೃತ


ಬಳಿ ಬಂದು ಎದೆ ತಾಕಿ ನಿಲ್ಲು ಇಲ್ಲದಂತೆ ಯಾವುದೇ ಅಂತರ
ಭಾವನೆಗಳಲಿ ಬೆರೆತ ನೀನು ನನ್ನ ನೆನಪುಗಳಿಲಿ ಇರುವೆ ನಿರಂತರ,
ಜೊತೆಯಾಗಿ ನಾವು ಸಾಗುತಿರೆ ದೂರದ ಆ ಗುರಿಯೂ ಈಗ ಹತ್ತಿರವಾಗಿದೆ
ನಿನ್ನ ಗುಣದಿಂದ ಅಲಂಕೃತವಾದ ನನ್ನ ಬದುಕಿನ ಧ್ಯೇಯವೀಗ ಬಹಳ ಎತ್ತರವಾಗಿದೆಮಂದಹಾಸ


ಇರುಳ ಬೆಳಕಲ್ಲಿ ತಂಪೆರಸುವ ಚೆಲುವು
ಚಂದ್ರನಿಗೇ ಸಾಟಿ ಅವಳ ಸುಂದರ ಮೊಗವು,
ಮಳೆಯಲ್ಲಿ ಮಿಂದು ಬೀಗುವ ಅರಳಿದ ಹೂವಂಥ ಮೊಗವು,
ಸದಾಕಾಲ ಜೊತೆಗೆ ಇದ್ದು ನಲಿಸುವುದು ಅವಳ ಮೃದುವಾದ ನಗುವು,
ನನ್ನವಳ ಮೃದು ಮಂದಹಾಸವು!- ಆದರ್ಶ