ಗಂಟು ಮೂಟೆ ಕಟ್ಟು ಗುರು
by Deepak basrur
ಗಂಟುಮೂಟೆ ಕಟ್ಟು ಗುರು, ಜೀವನ ಯಾಕೊ ಬೇಜಾರು
ಹುಡುಕು ಬೇರೆ ಏನಾದ್ರು, ಮುಂದೆ ಯಾವ್ದು ಹೊಸ ಊರು..
ತೋರು ಬೆರಳು ತೋರಿಸಿದ್ರು, ಇದೆ ದಾರಿ ಸರಿ ಕಣ್ರಪ್ಪ,
ಹೋದವ್ನ್ ಯಾರು ಅಡ್ರೆಸ್ಗಿಲ್ಲ, ಸ್ವಲ್ಪ ನೋಡ್ಕೊಂಡು ಹೋಗ್ರಪ್ಪ...
ರಾಜದಾರಿ ಅಲ್ದೆ ಇದ್ರೂ ಪರವಾಗಿಲ್ಲ, ಸರ್ವಿಸ್ ರೋಡೆ ಬೆಟರ್ರು,
ಯಾವನೋ ತೋರ್ಸಿದ ಮಾರ್ಗಕ್ಕಿಂತ, ನಮ್ ದಾರಿಲೇ ಇರೋದು ಖದರ್ರು......
ದೇವರು ಕೂಡ ಸಿಕ್ಬೋದು, ನಮ್ಗೆ ನಾವೇ ಸಿಗೋದು ಡೌಟು,
ಹುಡುಗೀನ್ ಬೇಕಾದ್ರು ತಿರುಗ್ಸಬೋದು, ನಮ್ ಜೀವನಾನ್ ತಿರುಗ್ಸೋದ್ರಲ್ಲಿ ಇರೋದು ಗ್ರೇಟು..
ಜೀವನ ಫುಲ್ಲು ಬಾಟಲಿಯಂತೆ, ಪೆಗ್ಗಲ್ ಅಳಿಬೇಕಂತೆ,
ಒಮ್ಮೆಲೇ ಪೂರ್ತಿ ಏರ್ಸೋರು ನಾವು, ನಿಮಗ್ಯಾಕ್ ಹೇಳಿ ನಮ್ ಚಿಂತೆ
ಆಯ್ತು ಸ್ವಾಮಿ ನಾವೇ ಲೂಸು, ನೀವೇ ಎಲ್ಲಾದ್ರಲ್ಲು ರೈಟು,
ನಿಯತ್ತಾಗಿ ಬದುಕಿ ತೋರ್ಸಿ, ನಾವೇ ಮಾಡ್ತಿವಿ ನಿಮ್ಗೆ ಸಲ್ಯೂಟು....
- ದೀಪಕ್ ಬಸ್ರೂರು