ಇತಿಹಾಸ ಹೇಳುವ ಸತ್ಯವಾದರೂ ಏನು?
ಇತಿಹಾಸ ಬರೆದ ಸತ್ಯವಂತನು ಯಾರು?
ಸುಳ್ಳನ್ನು ಸತ್ಯವೆಂದು ಹೇಳುವ ಚರಿತೆಯ ಸುಳ್ಳೆಂದು ಪ್ರಮಾಣಿಸಿ ಹೇಳುವರಾರು?
ಸತ್ಯವ ಹುದುಗಿಟ್ಟು, ಸುಳ್ಳನ್ನು ಸ್ವರ ಮಾಡಿ ಹಾಡುವ ಚರಿತೆಯ ರಾಗದಿ ತಪ್ಪು ಹುಡುಕುವವರು ಯಾರು?
ಸುಳ್ಳಾದ ಸುಳ್ಳನ್ನು, ಸತ್ಯವಾದ ಸತ್ಯವನ್ನು, ಬೆರೆಸಿ ಕಿರುಚಾಡಿ ಹೇಳುವುದು ಚರಿತೆ,
ಮರೆಮಾಚಿದ ಸತ್ಯವನ್ನು ಸುಳ್ಳಿಂದ ಹೊರತೆಗೆದು ಬೆತ್ತಲೆ ಸತ್ಯವ ನೋಡಲಾದೀತೇ?
ಹೂವಿನ ನಡುವಲ್ಲಿ ಮುಳ್ಳೊಂದು ಬೆರೆತಂತೆ,
ಕಣಿವೆಯಲಿ ಅಪರಿಚಿತ ಮಾರ್ದನಿಯು ಕೇಳುವಂತೆ,
ಕತ್ತಲೆಯ ಆಗಸದಲಿ ತಾರೆಗಳು ಮಿನುಗುವಂತೆ,
ಸತ್ಯವೂ ಸದಾ ಹುದುಗುತ್ತಿದೆ ಚರಿತೆಯಲಿ, ಯುಗಗಳು ಉರುಳಿದಂತೆ, ಅಗೋಚರ ಕೊನೆಯಂತೆ!


ಈ ಕವನದ ಧ್ವನಿ ರೂಪವನ್ನು ನಲ್ಲಿಕಾಯಿ ಯಲ್ಲಿ ಕೇಳಬಹುದು.


- ಆದರ್ಶ