• ಅನುರಾಗ

    ಅವಳ ಬಯಕೆ ನಿಶ್ಕಲ್ಮಶ ಅನುರಾಗ ನನ್ನ ಹರಕೆ ನಿಸ್ವಾರ್ಥದ ಸಂಭೋಗ ರಾಗ-ಭೋಗಗಳ ಸಂಯೋಗದಲಿ ನಡೆದಿದೆ ಇಂದು ವಯಸ್ಸಿನ ಉದ್ಯೋಗ! ಏಕಾಂತದ ಹಾಡು ಅವಳಲ್ಲೂ ಇದೆ, ಹೇಳಲು ಸ್ವರವಿಲ್ಲ ಅದನ್ನು ಕೇಳಲು ಕೌತುಕವೇ ಬೆಳೆದಿದೆ ನನ್ನ ತುಂಬೆಲ್ಲ, ನಿತ್ಯ ಹೊಸ್ತಿಲಲಿ ದೀಪವ ಹೊತ್ತಿ ಹಿಡಿದಳು ನನ್ನ ಆಗಮನಕೆ ಆಗಸಕೆ ಬೆಂಕಿ ಹೊತ್ತಿತು, ತಾಕಲು ಅವಳ ಕಂಗಳು ನನ್ನ ಜೀವಕೆ! ಹೊರಟಿದೆ ಜೋಡಿಯ ಪ್ರೀತಿಯ ತೇರು ಎಳೆಯುತ ಸಾಗಬೇಕು ಸರಾಗವಾಗಿ ಇಬ್ಬರು, ಅವಳ...


  • ಸಂಯಮ

    ಸಂತೇಲಿ ಸುಮ್ಮನೆ ನಿಂತು ಸುತ್ತ ನೋಡುವಂಥ ಸಂಯಮ ಜಾತ್ರೆಯಲ್ಲೂ ನಿಧಾನವಾಗಿ ನಡೆಯುವಂಥ ಸಂಯಮ ಮಾನಸ ಧರೆಯೊಳಗಿನ ಕ್ಷೋಭೆಯನ್ನೇ ತಣಿಸುವಂಥ ಸಂಯಮ ಕನಸ ಕ್ರೂರ ಕಿರುಚಾಟವನ್ನು ಮರೆಸುವಂಥ ಸಂಯಮ ಸಂಯಮ ಬೇಕು ಸಂಯಮ ಮುಗ್ಧ ಮನಸ್ಸಿನ ಮೌನದ ಮಾತನ್ನು ಆಲಿಸಲು ಕಿವಿಯಾಗುವಂಥ ಸಂಯಮ! - ಆದರ್ಶ


  • ಲೈಫು ಇಷ್ಟೇನೆ

    ಸ್ನೇಹಿತನ ಕೈ ಗಡಿಯಾರ ಕೆಟ್ಟಿತ್ತು. ವಾಚ್ ರಿಪೈರಿ ಮಾಡಲು ವಾಚ್ ರಿಪೈರಿ ಅಂಗಡಿಗೆ ಹೋಗಬೇಕಾದ್ದರಿಂದ ಅಲ್ಲಿಗೆ ಇಬ್ಬರೂ ಹೋದೆವು. ಅವನು ವಾಚ್ ರೆಪೇರಿ ಮಾಡಿಸುತ್ತಿರುವಾಗ, ನಂದೊಂದು ಕೈ ಗಡಿಯಾರದ ಬೆಲ್ಟ್ ಹೋಗಿದ್ದರಿಂದ ನಾನು ಅಂಗಡಿಯಲ್ಲಿರುವ ಇನ್ನೊಬ್ಬ ಕೆಲಸಗಾರನ ಹತ್ತಿರ ಆ ಬೆಲ್ಟಿನ ಬೆಲೆ ಎಷ್ಟಾಗುತ್ತೆ ಅಂತ ಕೇಳಿದೆ. ಅದಕ್ಕಾತ ೪೫೦ ರೂ. ಆಗುತ್ತೆ ಅಂದಾಗ ಒಮ್ಮೆಲೇ ದಿಗಿಲಾರಿತು. ಹಾಗೆ ಸಾವರಿಸಿಕೊಂಡು “ಅಣ್ಣ, ಆ ವಾಚಿನ ಬೆಲೆಯೇ ೮೦೦ ರೂ.“ ಅಂದೆ....


  • ಸರಳ ಚೆಲುವೆ

    ಹರಳುಗಣ್ಣಿನ, ಮೃದುವಾದ ನಗುವಿನ, ಸರಳ ಚೆಲುವೆ ನನ್ನ ಹುಡುಗಿ, ಮುದ್ದಾದ ಮೌನ, ಮಾತಲ್ಲಿ ಗಾನ, ನಲಿಯುತಿವೆ ಅವಳ ಮನದಲ್ಲಿ ಅಡಗಿ! ವೈಯ್ಯಾರದ ನಡಿಗೆಯಿಲ್ಲ, ತೋರಿಕೆಯ ಅಲಂಕಾರವಿಲ್ಲ, ನಡು ಹಣೆಗೆ ಇಡುವಳು ಬೊಟ್ಟು, ಸೂರ್ಯನ ಹೊಳಪಿಗೆ ದೃಷ್ಟಿಯಾಗುವಷ್ಟು! ಪಿಸುದನಿಯ ಒಡತಿಯು, ನುಡಿದಾಗ ಮಳೆಯೇ ಸುರಿದಂತೆ ಅನುಭವವು, ಮಾತಿನ ಝೇಂಕಾರಕೆ ಸೇರಿದೆ ಮೌನದ ಅಲಂಕಾರ, ಪ್ರತಿ ಗುಣದಲು ಬೆರೆತಿರುವುದು ಪ್ರೇಮದ ಸಾರ! ಮೃದು ಮಾತಿನ ಬೆಡಗಿ, ನನ್ನ ಹುಡುಗಿ! ಮುದ್ದಾದ ಮೌನ, ಮಾತಲ್ಲಿ...


  • ಬದಲಾವಣೆ

    ಪ್ರಕೃತಿಯಲ್ಲಿ ವಿಕಸನ ಆಗುವಾಗ ಬದಲಾವಣೆಯ ರೂಪ ಇದೇ ರೀತಿ ಇರಬೇಕು ಎಂದು ಯಾರೂ ನಿಯಮ ಬರೆದು, ಆ ವಿಕಸನದ ಪರಿಣಾಮವನ್ನು ನಿಯಂತ್ರಿಸಲು ಆಗುವುದಿಲ್ಲ. ನಾವು ಒಂದು ಬೀಜವನ್ನು ಬಿತ್ತಿ, ನೀರು-ಗೊಬ್ಬರ ಹಾಕಿ, ಯಾವುದೇ ಹಾನಿಯಾಗದಂತೆ ಗಿಡವನ್ನು ನೋಡಿಕೊಂಡು, ಬೆಳೆಸಿ ಮರವಾದ ನಂತರವೂ ಆ ಮರದ ರೆಂಬೆ, ಕೊಂಬೆಗಳು ನಾವು ಚೌಕಟ್ಟು ಹಾಕಿ, ಗೀಟೆಳೆದು, ‘ಸ್ಕೇಲ್’ ಹಿಡಿದು ಬಿಡಿಸಿದ ಮರದ ನಕ್ಷೆಯಂತೆ ಬೆಳೆಯುವುದಿಲ್ಲ. ವಿಕಸನದ ಪರಿಣಾಮವೂ ಸಹ ಹಾಗೆಯೇ, ಯಾರ ನಕ್ಷೆಯಂತೆ...