ಖಾಲಿ ಕುಂತೋರು ಮದುವೆ ಆದರು.
ಸುಮ್ಮನಿರೋಕಾಗಲ್ಲ ನಮ್ಮಂಥ ವಯಸ್ಸಿನ ಯುವಕರು!

ಅಡ್ಡಾದಿಡ್ಡಿ ಓಡಾಡ್ತಿವಿ, ಸುಮ್ಸುಮ್ನೆ ಹಾರಾಡ್ತಿವಿ,
ಒಬ್ಬರೇ ನಿಂತ್ಕಂಡು ಕೂಗಾಡ್ತಿವಿ, ನಮ್ಮನ್ನ ಕೇಳೋರು ಯಾರು?
ಮನೆಲ್ಲೆ ಕೂತು ಗೂಟ ಬಡಿತೀರಿ, ಓಡೋಕೂ ಆಗ್ದೆ ಒದ್ದಾಡ್ತೀರಿ,
ನಿದ್ದೆ ಇರದೆ ಮಲಗ್ತೀರಿ, ಸುಖವಾಗಿ ನೀವು ಮದುವೆ ಆದೋರು!

ಒಂಟಿ ಜೀವನ ಸಾಕು ಅಂತ,
ಮದುವೆ ಮಾಡ್ಸಿದ್ರು ಓಡೊ ಜೀವನ ನಿಲ್ಸೋಕಂತ,
ನದಿ ಎಲ್ಲಾದರೂ ನಿಲ್ಲೋದುಂಟ? ಸಾಗರವ ಸೇರದೆ ಬಿಡೋದುಂಟ?

ಉಸಿರು ಹಿಡ್ಕಂಡು ಓಡ್ತೀವಿ ನಾವು,
ಬೆಟ್ಟ, ಗುಡ್ಡ, ಕಾಡು, ಆಕಾಶ, ನದಿ, ಸಮುದ್ರ ಎಲ್ಲ ಹಿಂದಾದವು!
ಖಾಲಿ ಕುಂತೋರು ಮದುವೆ ಆದರು.
ಸುಮ್ಮನಿರೋಕಾಗಲ್ಲ ನಮ್ಮಂಥ ವಯಸ್ಸಿನ ಯುವಕರು!

- ಆದರ್ಶ