ನಿನದೇ ನೆನಪಲ್ಲಿ
by Pranitha
ನೀ ಬಂದೆ ಬದುಕಲ್ಲಿ, ಮಲೆನಾಡಿನ ಮಳೆಯ ಹಾಗೆ..,
ನೀ ಬಿಟ್ಟು ಹೋದ ನೆನಪುಗಳು, ಆಗುಂಬೆಯ ಹಚ್ಚ ಹಸಿರಿನ ಹಾಗೆ..,
ಮಳೆಯಲ್ಲಿ ಮಿಂದಾಗ, ಆಹಾ ಎಂಥಾ ಆಹ್ಲಾದ..,
ನೀನು ಬಳಿಯಲ್ಲಿ ಇದ್ದಾಗ, ಅದು ಬಣ್ಣಿಸಲಾರದ ಆನಂದ..,
ಮಳೆ ನಿಂತರೇನು, ಭುವಿಯನು ತಣಿಸಲು ಬರಲೇಬೇಕು..,
ನೀ ಹೋದರೇನು, ನೀ ಬರುವವರೆಗೂ ನಾ ಕಾಯಲೇಬೇಕು..,!
ನಿನದೇ ನೆನಪಲ್ಲಿ ನಾನು ಆಗುಂಬೆಯ ಮಡಿಲಲ್ಲಿ...
- ಪ್ರನಿತ