ಅಚ್ಚಕನ್ನಡ
ಕನ್ನಡದ ನಿತ್ಯ ಉತ್ಸವ
-
ಹಾವೇರಿ ಅನುಭವ
ಲಕ್ಷ್ಮೀನ ದ್ವಿತೀಯ ಪಿ.ಯು.ಸಿ ಗೆ ಸೇರಿಸಿಬರುವ ಕೆಲಸ ಇದ್ದುದರಿಂದ ನಾನು ಶುಕ್ರವಾರ ರಾತ್ರಿ 11 ಗಂಟೆಗೆ ಮೆಜೆಸ್ಟಿಕ್ ನಿಂದ ಹಾವೇರಿಗೆ ಹೋಗುವ ಬಸ್ ಹತ್ತಿದೆ. ಬಸ್ ಕಂಡಕ್ಟರ್ 5:30 ಕ್ಕೆ ಹಾವೇರಿ ತಲುಪುತ್ತೆ ಅಂದಿದ್ರು, ಆದರೆ ಕೆ.ಎಸ್.ಆರ್.ಟಿ.ಸಿ ಡ್ರೈವರ್ 4:30ಕ್ಕೆ ಹಾವೇರಿ ಬಸ್ಸ್ಟಾಂಡ್ಗೆ ತಂದು ನಿಲ್ಲಿಸಿಬಿಟ್ರು. ಈಗ ಲಕ್ಷ್ಮಿಗೆ ಕರೆ ಮಾಡಿ ತೊಂದರೆ ಕೊಡಬಾರದು ಎಂದುಕೊಂಡರೂ, ಹೊಸ ಊರು ಆದ್ದರಿಂದ ಬೇರೆ ದಾರಿ ಇರಲಿಲ್ಲ. ಕರೆ ಮಾಡಿದ ಸ್ವಲ್ಪ ಸಮಯದಲ್ಲೇ ಲಕ್ಷ್ಮಿ...
-
ಜಾರುಬಂಡೆ
ತತ್ವ ಸತ್ವ ಸೇರಿಕೊಂಡ ತಲೆಯ ಒಳಗೆ ಉಂಟು ಪ್ರಳಯ ಏಳುಬೀಳಿನ ಹಾದಿಯಲ್ಲಿ ಗುರಿ ಸಾಧನೆಯೊಂದೇ ವಿಷಯ, ಕೋಟಿ ಜನರ ಮಾತುಗಳ ಚರ್ಚೆ ಈಗ ತಲೆಯೊಳಗೆ ಅನ್ನಿಸಿದ ಹಾಗೆ ಮಾಡುವವನ ಪಯಣ ಎಂದಿಗೂ ಸೆರೆಮನಗೆ, ಏರುಪೇರಿನ ಜಗವು ಇದು ಹುಟ್ಟಿ ಏತಕೆ ನೀನು ಬಂದೆ? ಹೋಗಿಬರುವ ಜನರ ಮಾತ ಕೇಳಿ ಆಯಿತು ತಲೆಯು ಜಾರು ಬಂಡೆ! ಪೋಲಿ ಕನಸಿನ ಆಸೆ ಏತಕೆ, ಪ್ರೀತಿ ಕಳಿಸುವುದು ನಿನ್ನ ಪಾತಾಳಕೆ, ಅಂಟಿಕೊಂಡಿತು ವಯಸ್ಸಿಗೆ ಮೋಹವು,...
-
ತಿರುವು
ಅವನ ಹೆಸರು ಬಸಪ್ಪ, ಒಂಬತ್ತನೇ ತರಗತಿ ಇದ್ದಾಗಲೇ ಅಪ್ಪ ತೀರಿಕೊಂಡಿದ್ದರಿಂದ ಕೂಲಿ ಕೆಲಸಕ್ಕೆ ಹೂಗಬೇಕಾಯ್ತು. ಸ್ವಲ್ಪ ದಿನದ ನಂತರ ಕೆಲಸಕ್ಕೆಂದು ಬೆಂದಕಾಳೂರಿಗೆ ಬಂದ. ಅವನ ಅಮ್ಮ ಮತ್ತು ಚಿಕ್ಕ ತಂಗಿ ಊರಿನಲ್ಲೇ ಇದ್ದರು. ಇವನು ಬೆಂಗಳೂರಿನಲ್ಲಿ ಗಾರೆ ಕೆಲಸ ಮಾಡಿ ತನ್ನ ಖರ್ಚನ್ನು ಸರಿದೂಗಿಸಿ, ಮನೆಗೂ ಹಣ ಕಳಿಸುತ್ತಿದ್ದ. ಹೀಗೆ ಏರಿಳಿತ ಇಲ್ಲದ ಜೀವನ. ಹೀಗೆ ಜೀವನ ನಡಿಯುತ್ತಿರುವಾಗ ಈ ಬೆಂದಕಾಳೂರಿನಲ್ಲಿ ಇದ್ದಕಿದ್ದಂತೆ ಮಳೆ ಶುರು ಆಯಿತು. ಹತ್ತು, ಹದಿನೈದು...
-
ಯುವಕರು
ಖಾಲಿ ಕುಂತೋರು ಮದುವೆ ಆದರು. ಸುಮ್ಮನಿರೋಕಾಗಲ್ಲ ನಮ್ಮಂಥ ವಯಸ್ಸಿನ ಯುವಕರು! ಅಡ್ಡಾದಿಡ್ಡಿ ಓಡಾಡ್ತಿವಿ, ಸುಮ್ಸುಮ್ನೆ ಹಾರಾಡ್ತಿವಿ, ಒಬ್ಬರೇ ನಿಂತ್ಕಂಡು ಕೂಗಾಡ್ತಿವಿ, ನಮ್ಮನ್ನ ಕೇಳೋರು ಯಾರು? ಮನೆಲ್ಲೆ ಕೂತು ಗೂಟ ಬಡಿತೀರಿ, ಓಡೋಕೂ ಆಗ್ದೆ ಒದ್ದಾಡ್ತೀರಿ, ನಿದ್ದೆ ಇರದೆ ಮಲಗ್ತೀರಿ, ಸುಖವಾಗಿ ನೀವು ಮದುವೆ ಆದೋರು! ಒಂಟಿ ಜೀವನ ಸಾಕು ಅಂತ, ಮದುವೆ ಮಾಡ್ಸಿದ್ರು ಓಡೊ ಜೀವನ ನಿಲ್ಸೋಕಂತ, ನದಿ ಎಲ್ಲಾದರೂ ನಿಲ್ಲೋದುಂಟ? ಸಾಗರವ ಸೇರದೆ ಬಿಡೋದುಂಟ? ಉಸಿರು ಹಿಡ್ಕಂಡು ಓಡ್ತೀವಿ...
-
ನಿನದೇ ನೆನಪಲ್ಲಿ
ನೀ ಬಂದೆ ಬದುಕಲ್ಲಿ, ಮಲೆನಾಡಿನ ಮಳೆಯ ಹಾಗೆ.., ನೀ ಬಿಟ್ಟು ಹೋದ ನೆನಪುಗಳು, ಆಗುಂಬೆಯ ಹಚ್ಚ ಹಸಿರಿನ ಹಾಗೆ.., ಮಳೆಯಲ್ಲಿ ಮಿಂದಾಗ, ಆಹಾ ಎಂಥಾ ಆಹ್ಲಾದ.., ನೀನು ಬಳಿಯಲ್ಲಿ ಇದ್ದಾಗ, ಅದು ಬಣ್ಣಿಸಲಾರದ ಆನಂದ.., ಮಳೆ ನಿಂತರೇನು, ಭುವಿಯನು ತಣಿಸಲು ಬರಲೇಬೇಕು.., ನೀ ಹೋದರೇನು, ನೀ ಬರುವವರೆಗೂ ನಾ ಕಾಯಲೇಬೇಕು..,! ನಿನದೇ ನೆನಪಲ್ಲಿ ನಾನು ಆಗುಂಬೆಯ ಮಡಿಲಲ್ಲಿ... - ಪ್ರನಿತ