• ಮೂಗುತಿ

  ಮೆಟ್ರೊ ಕಾರ್ಡ್ ಇದ್ದ ಪರ್ಸನ್ನು ಸೆನ್ಸಾರ್ ಮೇಲೆ "ಇದು ನಂದಲ್ಲ" ಎನ್ನೋ ರೀತಿ ಬಿಸಾಕಿ, ಅದು ಬಾಗಿಲನ್ನು ತೆಗೆದ ಕೂಡಲೇ "ಇದು ನಂದೆ" ಅಂತ ಮತ್ತೆ ತೆಗೆದುಕೊಂಡೆ. ಅದಕ್ಕೆ ಅಲ್ಲಿದ್ದ ಮೆಟ್ರೊ ಸಿಬ್ಬಂದಿಯೂಬ್ಬಳು "ಪರ್ಸನ್ನು ಸ್ವಲ್ಪ ನಿಧಾನಕ್ಕೆ ಇಡಿ ಸರ್" ಎಂದಾಗ, ನಾನು "ಅಯ್ಯೋ ಬಿಡಿ, ಲವ್ವ್ನಲಿ ನಿಧಾನಕ್ಕೆ ಇಟ್ರೆ ದುಡ್ಡೇನು ಕಟ್ ಆಗೋದು ಕಡಮೆ ಆಗುತ್ತಾ?" ಅಂಥ ಕೇಳಿದ್ಕೆ, ಅವ್ಳು ನಕ್ಕು ಸುಮ್ಮನಾದಳು. ಅವಳ ಮೂಗುತಿ ಆ ನಗುವಿನ...


 • ಮೌನದ ಮಾತು

  ಏನೀ ಹುಡುಕಾಟ, ಏತಕ್ಕಾಗಿ ತಡಕಾಟ ಗುರಿ ಎಲ್ಲೋ ಕಂಡಂತಾಗುವುದು ಮರುಕ್ಷಣವೇ ಮರೆಯಾದಂತಾಗುವುದು. ನೂರು ಖುಷಿಗಳಿದ್ದರೂ ಮನದಲ್ಲಿದೆ ಮೌನ ಹಳೇ ನೆನಪುಗಳ ಎಡಬಿಡದೆ ಧ್ಯಾನ, ಕನಸುಗಳು ಕಣ್ತುಂಬಿವೆ ಬೆಳೆಯಲು ಎತ್ತರ ಏಕೋ ಸಿಗದಾಗಿದೆ ಯಾವುದಕ್ಕೂ ಉತ್ತರ. ಹುಡುಕ ಬಲ್ಲೆನೇ ನಾ ಆ ಕಾಣದಿರುವ ಹಾದಿಯ? ಏರಬಲ್ಲೆನೇ ಆ ನಾವಿಕನಿಲ್ಲದ ದೋಣಿಯ? ಏನನ್ನು ಹಂಬಲಿಸಿದೆ ಈ ನನ್ನ ಮನ, ಹುಡುಕುತಿದೆ ಅದ ಈ ನನ್ನ ಮೌನ - ಸೌಮ್ಯ ಪುರದ್


 • ನಿಯತ್ತು

  ದಿನ ನಿತ್ಯ ಅದೆಷ್ಟು ರಸ್ತೆ ಅಪಘಾತಗಳು ನಡೆಯುತ್ತಿರುತ್ತವೆ. ಕೆಲವರಿಗೆ ಮರಣದಾನ, ಇನ್ನು ಕೆಲವರಿಗೆ ಜೀವದಾನವಾಗಿರುತ್ತದೆ. ಹೀಗೆ ರಸ್ತೆ ಅಪಘಾತದಲ್ಲಿ ನೋವು ತಿಂದವರನ್ನು ನೋಡಿಕೊಳ್ಳಲು, ತಮ್ಮವರೆಂದು ಹೇಳಿಕೊಳ್ಳಲು ಯಾರಾದರು ಇದ್ದರೆ ಅಂಥವರ ಕಥೆ ಒಂದು ಕಡೆಯಾಗುತ್ತದೆ. ರಸ್ತೆಯಲ್ಲಿ ಬಿದ್ದಾಗ ತಮ್ಮವರು ಎಂದು ಹೇಳಿಕೊಳ್ಳಲು ಯಾರೂ ಇಲ್ಲದಾಗ ಅಥವಾ ಹೇಳಿಕೊಳ್ಳಲು ಆಗದಿದ್ದಾಗ, ಅಂತವರ ಕಥೆ ಇನ್ನೊಂದೆಡೆಯಾಗುತ್ತದೆ. ಇಂತವರ ಕಥೆಯು ದಾರಿಹೋಕರ ದಯೆ ಹಾಗು ಒಮ್ಮೊಮ್ಮೆ ಅಪಘಾತ ಮಾಡಿದವರ ಒಳ್ಳೆತನದ ಮೇಲೆ ನಿಂತಿರುತ್ತದೆ. ಇದಕ್ಕೆ...


 • ಎಂದೂ ಮುಗಿಯದ ನಿದಿರೆ

  ನೆನಪ ಹರಿದು ಮನಸ್ಸ ಕೊರೆದು ತನಿಖೆ ನಡೆಸೋ ಭೀಕರತೆ ಎದುರು ನಿಂತರು ನಿನ್ನ ಗುರುತಿಸದ ಪ್ರೀತಿಯ ಅತೀವ ಕ್ರೂರತೆ, ಅರಳುವ ಹೂವನ್ನು ಕಾಲಲ್ಲಿ ತುಳಿಯುವ ನಿನ್ನಯ ಮನಸ್ಸಿದು ಕಠೋರ ಪ್ರೀತಿಯ ಅರಿಯದೆ ಬಾಳುತಿರುವ ನಿನ್ನಯ ನೆನಪೇ ನನಗೆ ಅಘೋರ, ದೇವರ ಸನಿಹವ ಬಯಸುವ ಭಾವನೆ ತರಿಸಿದೆ ನನ್ನಯ ಮನಸ್ಸಿಗೆ ಪ್ರೀತಿಯು ಸಿಗದಿನ್ನು ಎನ್ನುವ ಸತ್ಯವ ತಿಳಿಸಿ, ತಳ್ಳಿರುವೆ ಎಂದೂ ಮುಗಿಯದ ನಿದಿರೆಗೆ! - ಆದರ್ಶ


 • ವೈವಾ

  ನನ್ನ ಕಾಲೇಜಿನ ದಿನಗಳಲ್ಲಿ ಹೆಚ್ಚಿನ ಲ್ಯಾಬ್ ವೈವಾ ದಲ್ಲಿ ಕೂತಿದ್ದು ದೀಕ್ಷಿತಾ ನಾಯ್ಡು ಜೊತೆ. ಇಬ್ಬರ ರೋಲ್ ನಂಬರ್ ಹಿಂದೆ ಮುಂದೆ ಇದ್ದ ಕಾರಣ  ನಾನೇ ಸಿಕ್ಕಿ ಬೀಳುತಿದ್ದೆ.  ಮೊದಲು ನನಗೆ ಕ್ವೆಶ್ಚನ್ ಕೇಳೋರು. ನಾನು ಗೊತ್ತಿಲ್ಲ ಅಂತಾ ಇದ್ದೆ. ಆಮೇಲೆ ಇವಳನ್ನ ಕೇಳೋರು. ಇವಳು ಒಂತರಾ ಗೂಗಲ್ ಇದ್ದಂಗೆ. ಒಂದು ಕ್ವೆಶ್ಚನ್ ಕೇಳಿದ್ರೆ ಹತ್ತು ಆನ್ಸರ್ ಕೊಡ್ತಾ ಇದ್ದಳು. ಅಷ್ಟೇ, ಆಮೇಲೆ ಏನಿದ್ರೂ ಅವರಿಬ್ಬರದ್ದೇ ಮಾತುಕಥೆ. ನಾನು ಮೇಜಿನ...