ನಡುವೆ ಅಂತರವಿರಲಿ ಹುಡುಗಿ,
ಹತ್ತಿರವಾದರೆ ನೀನು, ಜೀವವೆಲ್ಲ ಹೋಗುತ್ತೆ ಗುಡುಗಿ!

ಕೂಡಿಸೋಣ ನಾವು ಸ್ವಪ್ನದಲ್ಲೆ ವ್ಯಾಕರಣ
ಬರೆದು ಹಾಡಬೆಕು ಬಾಳಲ್ಲಿ ಹೊಸದಾದ ಚರಣ
ಅದೇಕೋ ಮರೆಯಾಗಿದೆ ಇಂದು ಬಾನಿಂದ ಬಣ್ಣವು
ನೀ ಬರಲು ಈಗ ಕರಿ ಮೋಡವೂ ಹಗುರವು

ಗಾಳಿಯಲ್ಲಿ ನೀನು ಕಳಿಸಿದ ಆ ಮೃದುವಾದ ಮುತ್ತು
ತಂದೊಡ್ಡಿದೆ ಇಂದು ನನಗೆ ತಪ್ಪಿಸಲಾರದ ಆಪತ್ತು
ದಯವಿಟ್ಟು ನನ್ನ ಮೇಲೆ ಕರುಣೆ ಇರಲಿ ಹುಡುಗಿ
ನೀ ಹತ್ತಿರವಾದರೆ ನನ್ನ ಜೀವವೆ ಹೋಗುತ್ತೆ ಗುಡುಗಿ

- ಆದರ್ಶ