ಏನೂ ಅರಿಯದ ಅವಳ ಮುಂದೆ ಎಲ್ಲ ಅರಿತ ನಾನು ಪೋಲಿ
ದೂರದಿ ನಿಂತು ಒಪ್ಪಿಗೆ ಸೂಚಿಸಿದ ಕಂಗಳ ನೋಡಿ ಸುಮ್ಮನೆ ಹೇಗೆ ಇರಲಿ,
ಅನುರಾಗ ಹಾಡುವ ಸಮಯಕೆ ನನ್ನ ಮನವು ಹಾಕಿದೆ ತಾಳ
ಶುಭಯೋಗ ಕೂಡುವ ಸಮಯದಿ ಇನ್ನು ಎಲ್ಲೆಡೆ ಮೊಳಗುವುದು ಘಟ್ಟಿಮೇಳ!

ಪರವಾನಗಿ ಸಿಕ್ಕಮೇಲೆ ಪರರ ಚಿಂತೆ ಏತಕೆ
ಸಂಜೆ ಕರಗೊ ಮುನ್ನವೇ, ಹೇಳದೆ ಒತ್ತುವೆ ಸಿಹಿಯಾದ ಮುದ್ರಿಕೆ.
ಬಾನಲ್ಲಿ ಬರೆಯಬೇಕು ನೀನು ನಮ್ಮಿಬ್ಬರ ಚಿತ್ರವ
ಸ್ವರ್ಗವೂ ಕಂಡು ನಾಚಬೇಕು ನಮ್ಮ ಹೊಸ ಪ್ರೀತಿ ರೂಪವ!

ಜೊತೆಯಾಗಿ ನಡೆವಾಗ ಕತ್ತಲೂ ಮಧುರ
ಯಾರೂ ಇಲ್ಲದ ಊರು ಸುತ್ತಲೂ ಸುಂದರ,
ಏನೂ ಅರಿಯದೆ ಮಿನುಗುವುದು ಶುಭ್ರವಾಗಿ ಅವಳ ಕಣ್ಣ ನೀಲಿ
ಎಲ್ಲ ಸಿಕ್ಕ ಮೇಲೂ ಅವಳಿಲ್ಲದಿದ್ದರೆ ಈ ಹೃದಯ ಖಾಲಿ ಖಾಲಿ!!

- ಆದರ್ಶ