ತತ್ವ ಸತ್ವ ಸೇರಿಕೊಂಡ ತಲೆಯ ಒಳಗೆ ಉಂಟು ಪ್ರಳಯ
ಏಳುಬೀಳಿನ ಹಾದಿಯಲ್ಲಿ ಗುರಿ ಸಾಧನೆಯೊಂದೇ ವಿಷಯ,
ಕೋಟಿ ಜನರ ಮಾತುಗಳ ಚರ್ಚೆ ಈಗ ತಲೆಯೊಳಗೆ
ಅನ್ನಿಸಿದ ಹಾಗೆ ಮಾಡುವವನ ಪಯಣ ಎಂದಿಗೂ ಸೆರೆಮನಗೆ,
ಏರುಪೇರಿನ ಜಗವು ಇದು ಹುಟ್ಟಿ ಏತಕೆ ನೀನು ಬಂದೆ?
ಹೋಗಿಬರುವ ಜನರ ಮಾತ ಕೇಳಿ ಆಯಿತು ತಲೆಯು ಜಾರು ಬಂಡೆ!

ಪೋಲಿ ಕನಸಿನ ಆಸೆ ಏತಕೆ,
ಪ್ರೀತಿ ಕಳಿಸುವುದು ನಿನ್ನ ಪಾತಾಳಕೆ,
ಅಂಟಿಕೊಂಡಿತು ವಯಸ್ಸಿಗೆ ಮೋಹವು,
ಇನ್ನು ಎಲ್ಲಿದೆ ವೇಗಕೆ ಹಿಡಿತವು!
ಏರುಪೇರಿನ ಹುಡುಗಿ ಹೃದಯ, ಅದರ ಹಿಂದೇಕೆ ನೀ ಹೋದೆ?
ಹೋಗಿಬರುವ ಹುಡುಗಿಯ ನೋಡಿ ಆಗಿದೆ ತಲೆಯು ಈಗ ಜಾರು ಬಂಡೆ

ಭುವಿಗೂ ಆಗಸಕೂ ಅಂತರ ಒಂದು
ಅದನು ಅಳೆಯಲು ನಿಂತಿರುವೆ ಬೆಳಕನು ತಂದು
ಇರುಳಲಿ ಹೊಳೆಯುವ ಚುಕ್ಕಿಗಳು ಹೇಳುತಿವೆ,
ನೆತ್ತಿಯ ಮೇಲೆ ಕನಸುಗಳೇ ನಲಿಯುತಿವೆ,
ಏರುಪೇರಿನ ಕನಸುಗಳ ಹಿಡಿಯುಲು ಏಕೆ ಓಡಿದೆ?
ಕನಸಿನ ಬೇಟೆಯಲಿ ತಲೆಯು ಆಗಿದೆ ಈಗ ಜಾರು ಬಂಡೆ!


- ಆದರ್ಶ