• ಕತ್ತಲ ಸಮಯ

    ಎಂತೆಂಥ ಕತ್ತಲೆಯ ಸಮಯ ಕಾದಿವೆಯೋ ನಮಗೆ, ಕಣ್ಣಿನ ಬೆಳಕನು ಮರೆಮಾಚಲು, ನೆನೆದರೆ ಒಮ್ಮೆಲೆ ಭಯವಾಗುವುದು ಮನಕೆ ನಿಂತಲ್ಲೇ ನಡುಗುವುದು ಕಾಲು. ಓಡುವುದು ಹೇಗೆ ಉಸುಕಿನಲ್ಲಿ, ನಡುಗುತಿರುವಾಗ ನೆಲವು ಅಡಿಯಲ್ಲಿ. ಏಳುವುದು ಸರಿಯೇ ನಸುಕಿನಲ್ಲಿ, ಸೂರ್ಯನೇ ಮೂಡದಿರೆ ಮೂಡಣದಲ್ಲಿ! ಇನ್ನೆಂಥ ಕತ್ತಲೆಯ ಕಾಲವೂ ಕಾದಿದೆಯೊ ನಮ್ಮಯ ದೂರದ ನೋಟದ ಆಚೆಗೆ. ಮರಣವೇ ಎದುರಿಗೆ ನಿಲ್ಲುವ ಭಾವನೆ, ಮರೆತರೂ ನಮ್ಮನು ನಾವು ಅರೆಘಳಿಗೆ. - ಆದರ್ಶ


  • ಮಳೆಗಾಲ ಬರುತಿದೆ

    ನಾನು ಹುಟ್ಟಿದ ವರುಷ ನಮ್ಮೂರ ಕೆರೆಯ ಕೋಡಿ ಬಿದ್ದಿತ್ತಂತೆ. ಅದಾದ ನಂತರ ನಾನು ಕಣ್ಣು ಬಿಟ್ಟು ಓಡಾಡುವ ಹಾಗಾದಾಗ ಕೆರೆ ತುಂಬಿ ಕೋಡಿ ಬಿದ್ದ ಸುದ್ದಿಯನ್ನ ಕೇಳಲಿಲ್ಲ. ಆದ್ರೆ ಜೋರು ಅನ್ನುವಂತ ಮಳೆ ಬಿದ್ದಿದ್ದನ್ನು ಊರಲ್ಲಿ ನಮ್ಮ ಮನೆಯ ಕಿಟಕಿಯ ಗೂಡಲ್ಲಿ ಕುಳಿತುಕೊಂಡು ನೋಡಿದ್ದೆ. ಒಂದು ಇನ್ನೂರು ಮೀಟರ್ ದೂರದ ಸಣ್ಣ ಹಳ್ಳದಲ್ಲಿ ಭರ್ಜರಿಯಾಗಿ ಮಳೆ ನೀರು ಹರಿಯುತ್ತಿತ್ತು. ಆ ದಿನಕ್ಕೆ ನನಗೆ ಅದು ನಡುಕ ಹುಟ್ತಿಸಿದಂತ ಸೊಗಸಾದ ಮಳೆಯಾಗಿತ್ತು....


  • ನಿನ್ನ ಮನೆ

    ಅತಿಶಯ ಮನದ ವಿಷಯಾರಾಧನೆ, ದೂರ ಇರುವ ಕಾಲದಿ ಅನುಕ್ಷಣವೂ ಆಪಾದನೆ. ಪ್ರೇಮವು ಈಗ ಎಲ್ಲೆಡೆ ಹರಡಿದ ಕಲ್ಪನೆ, ಬಿಗುಮಾನ ಇನ್ನು ಏತಕೆ, ನನ್ನ ಹೃದಯವೇ ಈಗ ನಿನ್ನ ಮನೆ! ಅರಳುವ ಮುನ್ನವೇ ನಿನ್ನ ಗಂಧವು ಹರಿದಿದೆ, ಅನುಭವಿಸದೆ ಇನ್ನು ನನಗೆ, ಬೇರೆ ದಾರಿ ಎಲ್ಲಿದೆ. ಕಾಲವೂ ಈಗ ನಿನ್ನ ಸ್ಪರ್ಶಕೆ ನಿಂತಂತ ಸೂಚನೆ, ಅನುಮಾನ ಇನ್ನು ಏತಕೆ, ನನ್ನ ಹೃದಯವೇ ಈಗ ನಿನ್ನ ಮನೆ. ಅತಿರೇಕವೇ ಅಲ್ಲ, ನಿನ್ನ ಕಾದು...


  • ಏಕಾಂತ

    ಏಕಾಂಗಿಯ ಸಂಚಾರಕೆ ಏಕಾಂತವೇ ಸಂಭಾವನೆ, ಈ ರೀತಿಯ ಉತ್ಸಾಹದಿ ಮನ ತುಂಬಿದೆ ಹೊಸ ಭಾವನೆ. ಮನವೀಗ ಬಯಕೆಗಳ ಪರಿಚಾರಕವಾಗಿದೆ, ತುಡಿತಗಳ ಪೂರೈಸಲು ಸಂಚಾರಕೆ ನಡೆದಿದೆ. ಹಾದೀಲಿ ತಂಗಾಳಿಯು ತೇಲಾಡುತ ಬೀಸಿದೆ, ಊರಿರುವ ದಿಕ್ಕು ಇಂದು ಮಾಯವಾಗಿದೆ! ತಲುಪಿದೆ ಮನವು ಕೊನೆಯಿಲ್ಲದ ತೀರವನ್ನು, ತಣಿಸುತಿದೆ ಇರುಳ ಸಾಗರದಲೆ ಈ ನನ್ನ ಮನವನ್ನು. ಉರುಳಿದೆ ಈಗ ಮರಳಿನ ಕೋಟೆ, ಬಿಡುಗಡೆಗೆ ಶುರು ಈಗ ಮನದಲ್ಲಿ ಬೇಟೆ! ಏಕಾಂಗಿಯ ಸಂಚಾರಕೆ ಏಕಾಂತವೇ ಸಂಭಾವನೆ, ಎಲ್ಲಕ್ಕೂ...


  • ಮಾಯಾವಿ

    ಇರುಳ ಕಳೆದು, ಬೆಳಕ ಸುರಿದು, ಮೇಲೆ ಬರುವ ಸೂರ್ಯ ಪ್ರಭಾವಿ, ನನ್ನ ಬಾಳಿಗೆ ಬೆಳಕು ಚೆಲ್ಲುತ ಬಂದಿರುವ ಹುಡುಗಿ, ನೀನು ಕಣೆ ಮಾಯಾವಿ! ಹುಣ್ಣಿಮೆಯ ರಾತ್ರಿಯಲಿ, ಚಂದ್ರ ಮಾಡುವ ಮೋಡಿಯಲಿ, ಅಬ್ಬರದಿ ತೇಲಿ ಬಂದಿದೆ ಸಾಗರದಲೆಯ ಮನವಿ, ನೀ ಬರುವ ಹೊತ್ತಲ್ಲಿ, ನನ್ನ ಮನದ ಮೂಲೆಯಲಿ, ನಿನ್ನ ಗೆಜ್ಜೆ ತಂದ ಸ್ವರ ಹೇಳಿದೆ ಹುಡುಗಿ, ನೀನು ಕಣೆ ಮಾಯಾವಿ! ಅರಳಿದ ಹೂವಿನ ಪರಿಮಳ, ತುಂಬುತ ನನ್ನ ಮನೆಯ ಅಂಗಳ, ಮನೆ...