ನಾನು ಗಟ್ಟಿ, ನೀನು ಮೆದು
ಒಟ್ಟಿಗೆ ಬದುಕಲು ಹದವಾದ ಜೀವನ ನಮ್ಮದು,
ನೀನು ಹೂವು, ನಾನು ಕಲ್ಲು
ಆದರು ಏಕೋ ಬೆಳಿಯಿತು ಬಂಧ ನಮ್ಮ ನಡುವಲ್ಲು.

ನಾನು ಬೆಟ್ಟ, ನೀನು ಗಾಳಿ,
ಒಬ್ಬರು ಸರಿಯುವವರೆಗೆ ಇನ್ನೊಬ್ಬರು ಇರಬೇಕು ತಾಳಿ.
ನಾನು ಹಾಲು, ನೀನು ಜೇನು,
ಬೆರೆಯದಿದ್ದರೆ ನಾವು ಈ ಬಾಳಲ್ಲಿ ಉಳಿಯುವುದಾದರೂ ಏನು?

ನಾನು ಗಟ್ಟಿ, ನೀನು ಮೃದು,
ಒಟ್ಟಿಗೆ ಇರಲು ಹಿತವಾದ ಜೋಡಿ ನಮ್ಮದು.
ನಿನ್ನ ಮಾತು, ನನ್ನ ಮೌನ,
ಸೇರಿದರೆ ಜೀವನವಿಡೀ ನಡೆಸುವುದು ಏನೋ ಧ್ಯಾನ.

- ಆದರ್ಶ