ಹದವಾದ ಜೀವನದಲ್ಲಿ ಮುದ ನೀಡುವ ಬಂಧನಕೆ,
ಮದುವೆ ಜೀವನವೇ ಇನ್ನು ಜೋಡಿ ಮನದ ಹರಕೆ!

ನಿಮ್ಮ ಆಗಮನವೇ ಚಪ್ಪರ,
ಶುಭ ಹರಕೆಯೇ ಮಂಟಪ,
ನಿಮ್ಮ ಜೊತೆಯೇ ಸಾಗಬೇಕು ನಮ್ಮ ಮದುವೆಯ ಸಡಗರ!

ನಿಮ್ಮ ನಡುವೆಯೇ ಶುರುವಾಗಲಿ ನಮ್ಮ ಹೊಸ ಪಯಣ
ಆ ಶುಭ ದಿನಕೆ ಬಯಸಿಹೆವು ನಿಮ್ಮಯ ಆಗಮನ!

- ಆದರ್ಶ