ಅಚ್ಚಕನ್ನಡ
ಕನ್ನಡದ ನಿತ್ಯ ಉತ್ಸವ
-
ಜೊತೆಯಾಗಿ
ಏನೂ ಅರಿಯದ ಅವಳ ಮುಂದೆ ಎಲ್ಲ ಅರಿತ ನಾನು ಪೋಲಿ ದೂರದಿ ನಿಂತು ಒಪ್ಪಿಗೆ ಸೂಚಿಸಿದ ಕಂಗಳ ನೋಡಿ ಸುಮ್ಮನೆ ಹೇಗೆ ಇರಲಿ, ಅನುರಾಗ ಹಾಡುವ ಸಮಯಕೆ ನನ್ನ ಮನವು ಹಾಕಿದೆ ತಾಳ ಶುಭಯೋಗ ಕೂಡುವ ಸಮಯದಿ ಇನ್ನು ಎಲ್ಲೆಡೆ ಮೊಳಗುವುದು ಘಟ್ಟಿಮೇಳ! ಪರವಾನಗಿ ಸಿಕ್ಕಮೇಲೆ ಪರರ ಚಿಂತೆ ಏತಕೆ ಸಂಜೆ ಕರಗೊ ಮುನ್ನವೇ, ಹೇಳದೆ ಒತ್ತುವೆ ಸಿಹಿಯಾದ ಮುದ್ರಿಕೆ. ಬಾನಲ್ಲಿ ಬರೆಯಬೇಕು ನೀನು ನಮ್ಮಿಬ್ಬರ ಚಿತ್ರವ ಸ್ವರ್ಗವೂ ಕಂಡು...
-
ನಡುವೆ ಅಂತರವಿರಲಿ
ನಡುವೆ ಅಂತರವಿರಲಿ ಹುಡುಗಿ, ಹತ್ತಿರವಾದರೆ ನೀನು, ಜೀವವೆಲ್ಲ ಹೋಗುತ್ತೆ ಗುಡುಗಿ! ಕೂಡಿಸೋಣ ನಾವು ಸ್ವಪ್ನದಲ್ಲೆ ವ್ಯಾಕರಣ ಬರೆದು ಹಾಡಬೆಕು ಬಾಳಲ್ಲಿ ಹೊಸದಾದ ಚರಣ ಅದೇಕೋ ಮರೆಯಾಗಿದೆ ಇಂದು ಬಾನಿಂದ ಬಣ್ಣವು ನೀ ಬರಲು ಈಗ ಕರಿ ಮೋಡವೂ ಹಗುರವು ಗಾಳಿಯಲ್ಲಿ ನೀನು ಕಳಿಸಿದ ಆ ಮೃದುವಾದ ಮುತ್ತು ತಂದೊಡ್ಡಿದೆ ಇಂದು ನನಗೆ ತಪ್ಪಿಸಲಾರದ ಆಪತ್ತು ದಯವಿಟ್ಟು ನನ್ನ ಮೇಲೆ ಕರುಣೆ ಇರಲಿ ಹುಡುಗಿ ನೀ ಹತ್ತಿರವಾದರೆ ನನ್ನ ಜೀವವೆ ಹೋಗುತ್ತೆ...
-
ಚಕ್ರ
ಮೊನ್ನೆ ಮೊನ್ನೆ ಮಗಳ ಸಣ್ಣ ಕೈ ಹಿಡಿದು ಹುಷಾರಾಗಿ ರಸ್ತೆ ದಾಟಿಸಿ ಸ್ಕೂಲ್ ಗೆ ಬಿಟ್ಟು ಬಂದಿದ್ದು, ಈಗಾಗಲೇ ದೊಡ್ಡವಳಾಗಿ ಅಮ್ಮನ ಕೈ ಹಿಡಿದು ಟ್ರಾಫಿಕ್ ನಲ್ಲಿ ಯಾವ ಸಿಗ್ನಲ್ ಬಿಡುತ್ತೆ ಅಂತ ನೋಡಿ ಜೋಪಾನವಾಗಿ ರಸ್ತೆ ದಾಟಿಸುವ ಹಾಗೆ ಬೆಳೆದು ನಿಂತಿದ್ದಾಳೆ. ಅಪ್ಪನ ಬೈಕಿನ ಮುಂದೆ ಕೂತು ತಾನೇ ಬೈಕ್ ಬಿಡುತ್ತಿದ್ದೇನೆ ಅನ್ನೋ ಹಾಗೆ ಬೀಗುತ್ತಿದ್ದ ಅವಳು ಈಗ, ತನ್ನ ಸ್ಚೂಟಿಯಲ್ಲಿ ಅಪ್ಪನನ್ನು ಹಿಂದೆ ಕೂರಿಸಿಕೊಂಡು “ಈ ರೋಡು...
-
ಅನುರಾಗ
ಅವಳ ಬಯಕೆ ನಿಶ್ಕಲ್ಮಶ ಅನುರಾಗ ನನ್ನ ಹರಕೆ ನಿಸ್ವಾರ್ಥದ ಸಂಭೋಗ ರಾಗ-ಭೋಗಗಳ ಸಂಯೋಗದಲಿ ನಡೆದಿದೆ ಇಂದು ವಯಸ್ಸಿನ ಉದ್ಯೋಗ! ಏಕಾಂತದ ಹಾಡು ಅವಳಲ್ಲೂ ಇದೆ, ಹೇಳಲು ಸ್ವರವಿಲ್ಲ ಅದನ್ನು ಕೇಳಲು ಕೌತುಕವೇ ಬೆಳೆದಿದೆ ನನ್ನ ತುಂಬೆಲ್ಲ, ನಿತ್ಯ ಹೊಸ್ತಿಲಲಿ ದೀಪವ ಹೊತ್ತಿ ಹಿಡಿದಳು ನನ್ನ ಆಗಮನಕೆ ಆಗಸಕೆ ಬೆಂಕಿ ಹೊತ್ತಿತು, ತಾಕಲು ಅವಳ ಕಂಗಳು ನನ್ನ ಜೀವಕೆ! ಹೊರಟಿದೆ ಜೋಡಿಯ ಪ್ರೀತಿಯ ತೇರು ಎಳೆಯುತ ಸಾಗಬೇಕು ಸರಾಗವಾಗಿ ಇಬ್ಬರು, ಅವಳ...
-
ಸಂಯಮ
ಸಂತೇಲಿ ಸುಮ್ಮನೆ ನಿಂತು ಸುತ್ತ ನೋಡುವಂಥ ಸಂಯಮ ಜಾತ್ರೆಯಲ್ಲೂ ನಿಧಾನವಾಗಿ ನಡೆಯುವಂಥ ಸಂಯಮ ಮಾನಸ ಧರೆಯೊಳಗಿನ ಕ್ಷೋಭೆಯನ್ನೇ ತಣಿಸುವಂಥ ಸಂಯಮ ಕನಸ ಕ್ರೂರ ಕಿರುಚಾಟವನ್ನು ಮರೆಸುವಂಥ ಸಂಯಮ ಸಂಯಮ ಬೇಕು ಸಂಯಮ ಮುಗ್ಧ ಮನಸ್ಸಿನ ಮೌನದ ಮಾತನ್ನು ಆಲಿಸಲು ಕಿವಿಯಾಗುವಂಥ ಸಂಯಮ! - ಆದರ್ಶ