ಬಂದರೆ ನೀನು ನನ್ನೆಡೆಗೆ ನುಗ್ಗುತ,
ನನ್ನ ಸುತ್ತೆಲ್ಲ ಒಮ್ಮೆಗೆ ವಾಯುಭಾರ ಕುಸಿತ.
ಹರಿದಾಗ ನಿನ್ನ ಪರಿಮಳ ನನ್ನ ಸುತ್ತ,
ಇಡೀ ಪ್ರಪಂಚಕೆ ಆದಂತಾಗಿದೆ ಈಗ ವಾಯುಭಾರ ಕುಸಿತ!

ಕನಸಲ್ಲಿ ಬರಲು ನೀ ನನ್ನ ಮನವ ಸೇರುತ,
ನಿದಿರೆಯಲ್ಲೇ ಉಂಟಾಗಿದೆ ಜೀವದ ವಾಯುಭಾರ ಕುಸಿತ.
ಮರಣದಲ್ಲಿ ಬಂದುಳಿಸಿದೆ ನಿನ್ನ ಸ್ನೇಹವ ತೋರುತ,
ಬಿರುಗಾಳಿಯೇ ತಬ್ಬಿ ಮಲಗಿದೆ ಇಲ್ಲಿ ನನ್ನ ಮನವ,
ಉಂಟಾಗಿದೆ ಈಗ ನನ್ನ ಜಗದ ವಾಯುಭಾರ ಕುಸಿತ!

ತಂಗಾಳಿಯು ತೇರಲ್ಲಿ ಜಗವನ್ನು ಸುತ್ತುತ,
ನನಗಾಗಿ ಬಂದಿದೆ ನಿನ್ನ ನೆನಪನ್ನು ನೀಡುತ.
ನಿನ್ನ ನೆನಪೆಲ್ಲ ನನ್ನ ಮನೆಯ ಅಂಗಳವ ಆವರಿಸುತ,
ಉಂಟಾಗಿದೆ ಈಗ ನನ್ನ ಎದೆಯ ವಾಯುಭಾರ ಕುಸಿತ!

- ಆದರ್ಶ