ಅಚ್ಚಕನ್ನಡ
ಕನ್ನಡದ ನಿತ್ಯ ಉತ್ಸವ
-
ನಿನ್ನ ಮನೆ
ಅತಿಶಯ ಮನದ ವಿಷಯಾರಾಧನೆ, ದೂರ ಇರುವ ಕಾಲದಿ ಅನುಕ್ಷಣವೂ ಆಪಾದನೆ. ಪ್ರೇಮವು ಈಗ ಎಲ್ಲೆಡೆ ಹರಡಿದ ಕಲ್ಪನೆ, ಬಿಗುಮಾನ ಇನ್ನು ಏತಕೆ, ನನ್ನ ಹೃದಯವೇ ಈಗ ನಿನ್ನ ಮನೆ! ಅರಳುವ ಮುನ್ನವೇ ನಿನ್ನ ಗಂಧವು ಹರಿದಿದೆ, ಅನುಭವಿಸದೆ ಇನ್ನು ನನಗೆ, ಬೇರೆ ದಾರಿ ಎಲ್ಲಿದೆ. ಕಾಲವೂ ಈಗ ನಿನ್ನ ಸ್ಪರ್ಶಕೆ ನಿಂತಂತ ಸೂಚನೆ, ಅನುಮಾನ ಇನ್ನು ಏತಕೆ, ನನ್ನ ಹೃದಯವೇ ಈಗ ನಿನ್ನ ಮನೆ. ಅತಿರೇಕವೇ ಅಲ್ಲ, ನಿನ್ನ ಕಾದು...
-
ಏಕಾಂತ
ಏಕಾಂಗಿಯ ಸಂಚಾರಕೆ ಏಕಾಂತವೇ ಸಂಭಾವನೆ, ಈ ರೀತಿಯ ಉತ್ಸಾಹದಿ ಮನ ತುಂಬಿದೆ ಹೊಸ ಭಾವನೆ. ಮನವೀಗ ಬಯಕೆಗಳ ಪರಿಚಾರಕವಾಗಿದೆ, ತುಡಿತಗಳ ಪೂರೈಸಲು ಸಂಚಾರಕೆ ನಡೆದಿದೆ. ಹಾದೀಲಿ ತಂಗಾಳಿಯು ತೇಲಾಡುತ ಬೀಸಿದೆ, ಊರಿರುವ ದಿಕ್ಕು ಇಂದು ಮಾಯವಾಗಿದೆ! ತಲುಪಿದೆ ಮನವು ಕೊನೆಯಿಲ್ಲದ ತೀರವನ್ನು, ತಣಿಸುತಿದೆ ಇರುಳ ಸಾಗರದಲೆ ಈ ನನ್ನ ಮನವನ್ನು. ಉರುಳಿದೆ ಈಗ ಮರಳಿನ ಕೋಟೆ, ಬಿಡುಗಡೆಗೆ ಶುರು ಈಗ ಮನದಲ್ಲಿ ಬೇಟೆ! ಏಕಾಂಗಿಯ ಸಂಚಾರಕೆ ಏಕಾಂತವೇ ಸಂಭಾವನೆ, ಎಲ್ಲಕ್ಕೂ...
-
ಮಾಯಾವಿ
ಇರುಳ ಕಳೆದು, ಬೆಳಕ ಸುರಿದು, ಮೇಲೆ ಬರುವ ಸೂರ್ಯ ಪ್ರಭಾವಿ, ನನ್ನ ಬಾಳಿಗೆ ಬೆಳಕು ಚೆಲ್ಲುತ ಬಂದಿರುವ ಹುಡುಗಿ, ನೀನು ಕಣೆ ಮಾಯಾವಿ! ಹುಣ್ಣಿಮೆಯ ರಾತ್ರಿಯಲಿ, ಚಂದ್ರ ಮಾಡುವ ಮೋಡಿಯಲಿ, ಅಬ್ಬರದಿ ತೇಲಿ ಬಂದಿದೆ ಸಾಗರದಲೆಯ ಮನವಿ, ನೀ ಬರುವ ಹೊತ್ತಲ್ಲಿ, ನನ್ನ ಮನದ ಮೂಲೆಯಲಿ, ನಿನ್ನ ಗೆಜ್ಜೆ ತಂದ ಸ್ವರ ಹೇಳಿದೆ ಹುಡುಗಿ, ನೀನು ಕಣೆ ಮಾಯಾವಿ! ಅರಳಿದ ಹೂವಿನ ಪರಿಮಳ, ತುಂಬುತ ನನ್ನ ಮನೆಯ ಅಂಗಳ, ಮನೆ...
-
ನಾನ್ಯಾರು
ಇಲ್ಲಿ ಹುಟ್ಟೋ ಪ್ರಾಣಿಗಳಿಗೆ ಸಮಯ, ಜಗತ್ತು, ವಾತಾವರಣ, ಹಸಿವು ಜೀವನವನ್ನ - ಬದುಕುವುದನ್ನ, ಹೊಟ್ಟೆ ತುಂಬಿಸಿಕೊಳ್ಳುವುದನ್ನು ಕಲಿಸುತ್ತವೆ. ಪ್ರತಿಯೊಂದು ಪ್ರಾಣಿಯೂ ಅವುಗಳ ಶಕ್ತಿಗೆ ಅನುಸಾರವಾಗಿ ತಮ್ಮ ಹಸಿವನ್ನು ನೀಗಿಸಿಕೊಳ್ಳುತ್ತವೆ. ಪ್ರಕೃತಿಯ ಬದಲಾವಣೆಗೆ ಹೊಂದಿಕೊಳ್ಳದೆ, ಇತರೆ ಪ್ರಾಣಿಗಳೊಂದಿಗಿನ ಪೈಪೋಟಿಯಲ್ಲಿ ಸೋತರೆ, ಕೊನೆಗೆ ಸೊರಗಿ ಸಾಯಲೇಬೇಕು. ಇದು ಸಹಜ ಧರ್ಮ. ಈಗ ಹತ್ತು ತಿಂಗಳ ಹಿಂದೆ ನಮ್ಮ ಮನೆಗೆ ಒಂದು ಬೆಕ್ಕಿನ ಮರಿಯನ್ನು ತಂದೆ. ಆಗ ಅದಕ್ಕೆ ಎರಡು ತಿಂಗಳಷ್ಟು ವಯಸ್ಸಾಗಿತ್ತು. ಅಲ್ಲಿಯವರೆಗೆ...
-
ನಶ್ವರ
ಯಾರ ಜೀವನ ಇಲ್ಲಿ ಶಾಶ್ವತ, ಮುನ್ನಡೆಯಲೇ ಬೇಕು ನಾವು ಎಲ್ಲವ ತೊರೆಯುತ. ಅಪರೂಪವಲ್ಲ ಈಗ ಜೀವನದಲ್ಲಿ ಯಾವದೇ ಘಟನೆ ಅನುಭವಿಸುತ ಅವನೆಲ್ಲ ಸಾಗುತಿರಬೇಕು ಸುಮ್ಮನೆ, ಹರಿಯುತ್ತಿರುವ ನದಿಯ ಮೇಲೆ ಯಾವುದು ಉಳಿವುದು ನಿಲ್ಲುತಾ? ಯಾರ ಜೀವನದಲ್ಲಿ ಏನು ಉಳಿವುದು? ಏನೂ ಅಲ್ಲ ಇಲ್ಲಿ ಶಾಶ್ವತ. ಯಾವ ಪಯಣದಲ್ಲಿ ಯಾರು ಜೊತೆ ಬರುವರೊ? ಯಾವ ಗುರಿಯಲ್ಲಿ ಯಾರು ನಮ್ಮ ಸೇರುವರೊ? ಯಾರೂ ಜೊತೆಯಲ್ಲ ನಿನಗೆ, ಎಂದಿಗೂ ನೀನು ವಿವಿಕ್ತ ಯಾವ ದಾರಿಯಲ್ಲಿ...