• ಯುವಕರು

  ಖಾಲಿ ಕುಂತೋರು ಮದುವೆ ಆದರು. ಸುಮ್ಮನಿರೋಕಾಗಲ್ಲ ನಮ್ಮಂಥ ವಯಸ್ಸಿನ ಯುವಕರು! ಅಡ್ಡಾದಿಡ್ಡಿ ಓಡಾಡ್ತಿವಿ, ಸುಮ್ಸುಮ್ನೆ ಹಾರಾಡ್ತಿವಿ, ಒಬ್ಬರೇ ನಿಂತ್ಕಂಡು ಕೂಗಾಡ್ತಿವಿ, ನಮ್ಮನ್ನ ಕೇಳೋರು ಯಾರು? ಮನೆಲ್ಲೆ ಕೂತು ಗೂಟ ಬಡಿತೀರಿ, ಓಡೋಕೂ ಆಗ್ದೆ ಒದ್ದಾಡ್ತೀರಿ, ನಿದ್ದೆ ಇರದೆ ಮಲಗ್ತೀರಿ, ಸುಖವಾಗಿ ನೀವು ಮದುವೆ ಆದೋರು! ಒಂಟಿ ಜೀವನ ಸಾಕು ಅಂತ, ಮದುವೆ ಮಾಡ್ಸಿದ್ರು ಓಡೊ ಜೀವನ ನಿಲ್ಸೋಕಂತ, ನದಿ ಎಲ್ಲಾದರೂ ನಿಲ್ಲೋದುಂಟ? ಸಾಗರವ ಸೇರದೆ ಬಿಡೋದುಂಟ? ಉಸಿರು ಹಿಡ್ಕಂಡು ಓಡ್ತೀವಿ...


 • ನಿನದೇ ನೆನಪಲ್ಲಿ

  ನೀ ಬಂದೆ ಬದುಕಲ್ಲಿ, ಮಲೆನಾಡಿನ ಮಳೆಯ ಹಾಗೆ.., ನೀ ಬಿಟ್ಟು ಹೋದ ನೆನಪುಗಳು, ಆಗುಂಬೆಯ ಹಚ್ಚ ಹಸಿರಿನ ಹಾಗೆ.., ಮಳೆಯಲ್ಲಿ ಮಿಂದಾಗ, ಆಹಾ ಎಂಥಾ ಆಹ್ಲಾದ.., ನೀನು ಬಳಿಯಲ್ಲಿ ಇದ್ದಾಗ, ಅದು ಬಣ್ಣಿಸಲಾರದ ಆನಂದ.., ಮಳೆ ನಿಂತರೇನು, ಭುವಿಯನು ತಣಿಸಲು ಬರಲೇಬೇಕು.., ನೀ ಹೋದರೇನು, ನೀ ಬರುವವರೆಗೂ ನಾ ಕಾಯಲೇಬೇಕು..,! ನಿನದೇ ನೆನಪಲ್ಲಿ ನಾನು ಆಗುಂಬೆಯ ಮಡಿಲಲ್ಲಿ... - ಪ್ರನಿತ


 • ಜೊತೆಯಾಗಿ

  ಏನೂ ಅರಿಯದ ಅವಳ ಮುಂದೆ ಎಲ್ಲ ಅರಿತ ನಾನು ಪೋಲಿ ದೂರದಿ ನಿಂತು ಒಪ್ಪಿಗೆ ಸೂಚಿಸಿದ ಕಂಗಳ ನೋಡಿ ಸುಮ್ಮನೆ ಹೇಗೆ ಇರಲಿ, ಅನುರಾಗ ಹಾಡುವ ಸಮಯಕೆ ನನ್ನ ಮನವು ಹಾಕಿದೆ ತಾಳ ಶುಭಯೋಗ ಕೂಡುವ ಸಮಯದಿ ಇನ್ನು ಎಲ್ಲೆಡೆ ಮೊಳಗುವುದು ಘಟ್ಟಿಮೇಳ! ಪರವಾನಗಿ ಸಿಕ್ಕಮೇಲೆ ಪರರ ಚಿಂತೆ ಏತಕೆ ಸಂಜೆ ಕರಗೊ ಮುನ್ನವೇ, ಹೇಳದೆ ಒತ್ತುವೆ ಸಿಹಿಯಾದ ಮುದ್ರಿಕೆ. ಬಾನಲ್ಲಿ ಬರೆಯಬೇಕು ನೀನು ನಮ್ಮಿಬ್ಬರ ಚಿತ್ರವ ಸ್ವರ್ಗವೂ ಕಂಡು...


 • ನಡುವೆ ಅಂತರವಿರಲಿ

  ನಡುವೆ ಅಂತರವಿರಲಿ ಹುಡುಗಿ, ಹತ್ತಿರವಾದರೆ ನೀನು, ಜೀವವೆಲ್ಲ ಹೋಗುತ್ತೆ ಗುಡುಗಿ! ಕೂಡಿಸೋಣ ನಾವು ಸ್ವಪ್ನದಲ್ಲೆ ವ್ಯಾಕರಣ ಬರೆದು ಹಾಡಬೆಕು ಬಾಳಲ್ಲಿ ಹೊಸದಾದ ಚರಣ ಅದೇಕೋ ಮರೆಯಾಗಿದೆ ಇಂದು ಬಾನಿಂದ ಬಣ್ಣವು ನೀ ಬರಲು ಈಗ ಕರಿ ಮೋಡವೂ ಹಗುರವು ಗಾಳಿಯಲ್ಲಿ ನೀನು ಕಳಿಸಿದ ಆ ಮೃದುವಾದ ಮುತ್ತು ತಂದೊಡ್ಡಿದೆ ಇಂದು ನನಗೆ ತಪ್ಪಿಸಲಾರದ ಆಪತ್ತು ದಯವಿಟ್ಟು ನನ್ನ ಮೇಲೆ ಕರುಣೆ ಇರಲಿ ಹುಡುಗಿ ನೀ ಹತ್ತಿರವಾದರೆ ನನ್ನ ಜೀವವೆ ಹೋಗುತ್ತೆ...


 • ಚಕ್ರ

  ಮೊನ್ನೆ ಮೊನ್ನೆ ಮಗಳ ಸಣ್ಣ ಕೈ ಹಿಡಿದು ಹುಷಾರಾಗಿ ರಸ್ತೆ ದಾಟಿಸಿ ಸ್ಕೂಲ್ ಗೆ ಬಿಟ್ಟು ಬಂದಿದ್ದು, ಈಗಾಗಲೇ ದೊಡ್ಡವಳಾಗಿ ಅಮ್ಮನ ಕೈ ಹಿಡಿದು ಟ್ರಾಫಿಕ್ ನಲ್ಲಿ ಯಾವ ಸಿಗ್ನಲ್ ಬಿಡುತ್ತೆ ಅಂತ ನೋಡಿ ಜೋಪಾನವಾಗಿ ರಸ್ತೆ ದಾಟಿಸುವ ಹಾಗೆ ಬೆಳೆದು ನಿಂತಿದ್ದಾಳೆ. ಅಪ್ಪನ ಬೈಕಿನ ಮುಂದೆ ಕೂತು ತಾನೇ ಬೈಕ್ ಬಿಡುತ್ತಿದ್ದೇನೆ ಅನ್ನೋ ಹಾಗೆ ಬೀಗುತ್ತಿದ್ದ ಅವಳು ಈಗ, ತನ್ನ ಸ್ಚೂಟಿಯಲ್ಲಿ ಅಪ್ಪನನ್ನು ಹಿಂದೆ ಕೂರಿಸಿಕೊಂಡು “ಈ ರೋಡು...