ಹರಿದಾಗ ನೀನು ನನ್ನ ಸುತ್ತ,
ಏಳು ಬೀಳು ಇರದೆ ಆಗುವೆನು ಮುಕ್ತ!

ಬಯಕೆಗಳೇ ಬೇಡ, ಹಾಡುವೆ ಮನದ ಹಾಡ,
ಜೊತೆಯಾಗಿ ನೀ ಬರಲು.
ಬರುವೆನು ಮನಸಾರೆ, ಪಿಸುದನಿಯಲೂ ನೀ ಕರೆದರೆ,
ಅನುರಾಗಿ ನಾನಾಗಲು!

ಹರಿದಾಗ ನೀನು ನನ್ನ ಸುತ್ತ,
ಆಸೆಗಳ ತೊರೆದು ಆಗುವೆನು ಮುಕ್ತ!

ದಿನಗಳು ಈಗ ಕ್ಷಣವಾಗಿವೆ, ಅಂತ್ಯವೂ ಈಗ ಆರಂಭವೇ,
ಹೊಸದಾಗಿ ನೀ ಸಿಗಲು.
ನವಜೀವನ ಹೊಸ್ತಿಲಲ್ಲೇ, ನೀ ಹೆಜ್ಜೆಯನಿಟ್ಟಲ್ಲೇ,
ನನ್ನಲ್ಲೇ ನೀ ನೆಲೆಸಲು!

ಹರಿದಾಗ ನೀನು ನನ್ನ ಸುತ್ತ,
ಮನದಾಳದ ಅಲೆಗಳು ತಣಿದವು, ಇನ್ನು ನಾನು ಮುಕ್ತ!!

- ಆದರ್ಶ