ಬರುವಾಗಲೆ ಬೆಳಕಾಗಿಯೇ ಬರುವ ನೀ ಚಂದ
ಅತಿಯಾಗಿಯೇ ಕನಸಾಗುವ ನಿನ್ನಿಂದ ಆನಂದ
ರೂಪವ ತೋರುತ ಬೆಳಗುವ ಕಣ್ಣಿಗೆ ತಂಪನು ನೀಡುತ ಕೂತಿದೆ ಕಾಡಿಗೆ,
ನಿನ್ನ ಕಂಗಳ ಕಪ್ಪಿನ ಮೋಹಕೆ ಬಲಿಯಾಗಿ ಪಡುವಣಕೆ ತಿರುಗಿದೆ ಈ ಸೂರ್ಯನ ನಡಿಗೆ!

ನನ್ನೆಲ್ಲ ತತ್ವಗಳ ಅಲುಗಾಡಿಸಿದ ರೇಜಿಗೆಗೆ
ನುಗ್ಗುತಿದೆ ನನ್ನ ಮನವು ಅನುಕ್ಷಣವೂ ನಿನ್ನ ಬಳಿಗೆ
ಆಕರ್ಷಣೆಯ ಕೇಂದ್ರ ಬಿಂದುವಾಯಿತು ಈಗ ನಿನ್ನ ಕಣ್ಣ ಕಾಡಿಗೆ
ನಿನ್ನ ಸುತ್ತವಷ್ಟೆ ಸಾಗುವುದು ಇನ್ನು ಮೇಲೆ ಈ ಸೂರ್ಯನ ನಡಿಗೆ!

ಏಕಾಂತವ ನಿರೂಪಿಸಿದೆ ವಯಸ್ಸಿನ ಆಗರ,
ಪ್ರೀತಿಯಲ್ಲಿ ಮುಳುಗಿಸುತಿದೆ ನಿನ್ನ ಕಣ್ಣ ಸಾಗರ.
ತೇಲುವ ಶಕ್ತಿಯ ನೀಡಿದೆ ಈಗ ನಿನ್ನ ಕಣ್ಣ ಕಾಡಿಗೆ,
ನಿನ್ನ ಕಂಗಳ ದಿಗಂತದಿ ಮುಳುಗಲು ನಡೆದಿದೆ ಈ ಸೂರ್ಯನ ನಡಿಗೆ!

- ಆದರ್ಶ