ಮನಸ್ಸ ತೊರೆದು ಹೋದಳಿಂದು ನನ್ನ ಶೃತಿಯ ಶಾರದೆ,
ನನದೇ ಕೈಯ್ಯ ಹಿಡಿತದಿಂದ ಶಾಂತಿ ಹಾರಿತು ಮರಳದೆ.
ಏಕೋ ಸಾಗಿದೆ ನನ್ನ ಪಯಣ ಇನ್ನೂ ಈಗ ನಿಲ್ಲದೆ,
ಹೃದಯ ರಾಗದಿ ಕಾಣುತಿಲ್ಲ ಈಗ ನನ್ನ ಶೃತಿಯ ಶಾರದೆ.

ರಾಗ - ತಾಳ - ಪದ ಸೇರಬೇಕು ಮೂಡಲು ಸುಂದರ ಹಾಡೊಂದು,
ಮೂರಲಿ ಯಾವೊಂದು ಇರದೆ ಹಾಡಲಿ ಸೊಗಸೇ ಇರದು.
ಉಳಿಯಬಾರದೆ ದೂರ ಹೋಗದೆ, ಓ ನನ್ನ ಶೃತಿಯ ಶಾರದೆ;
ಬಾಳ ಹಾಡಲಿ ಏನೂ ಇಲ್ಲ ಈಗ ನೀನು ನನ್ನೊಡನೆ ಇರದೆ.

ಪ್ರೀತಿ ಎರೆದು ಹೋದಳಿಂದು ನನ್ನ ಶೃತಿಯ ಶಾರದೆ,
ಬಾಳ ಹಾದಿಯ ಹೇಗೆ ಸವೆಸಲಿ ಮನಸ್ಸಲ್ಲಿ ಹಾಡೊಂದು ಇರದೆ.
ಏಕೋ ಸಾಗಿದೆ ನನ್ನ ಪಯಣ ಇನ್ನೂ ಈಗ ನಿಲ್ಲದೆ,
ಹೃದಯ ರಾಗದಿ ಕಾಣುತಿಲ್ಲ ಈಗ ನನ್ನ ಶೃತಿಯ ಶಾರದೆ.

- ಆದರ್ಶ