• ವಾಸ್ತು

  ಮನದ ಮೂಲೆಯಲ್ಲಿ ನಿಂತು, ಎಲ್ಲದಕ್ಕೂ ಅಂತು ಅಸ್ತು, ಒಳ್ಳೆದು ಕೆಟ್ಟದ್ದು ಏನೆ ಬರಲಿ, ಒಪ್ಪಿಕೊಂಡಿತ್ತು ನನ್ನ ಮನದ ವಾಸ್ತು. ಏರಿದಂತೆ ಎದೆಯ ಬಡಿತ, ಏರುಪೇರಾಯ್ತು ಕಾಲ ಕುಣಿತ. ನೂರು ನಡುಕ ಒಳಕ್ಕೆ ಬಂತು, ಎಲ್ಲ ಒಳ್ಳೆದಕ್ಕಂತು, ನನ್ನ ಮನದ ವಾಸ್ತು. ನೂರು ಜನರ ಒಲುಮೆ ಇರಲಿ, ನೂರು ಜನ ಬೈದು ಬಿಡಲಿ, ಎಲ್ಲವೂ ಒಂದೆ ಯಾವತ್ತು. ನಿನ್ನ ಪಾಡಿಗೆ ನೀನಿರು, ಅನ್ನೋದು ಈ ಮನದ ವಾಸ್ತು. - ಆದರ್ಶ


 • ಮಾನವನಾಗಬೇಡ

  ಕಮ್ಮಾರನಾಗಬೇಡ ನೀ, ಕುಂಬಾರನಾಗಬೇಡ, ಕತ್ತಿ ಹಿಡಿಯಬೇಡ ನೀ, ಕ್ಷತ್ರಿಯನಾಗಬೇಡ, ದುಡಿದು ಗಳಿಸಿ ನಿನ್ನೊಲವಿನಂತಾಗಬೇಡ. ಏನೂ ಆಗಬೇಡ ನೀ, ಕೊನೆಗೆ ಮಾನವನಾಗಬೇಡ. ಬುದ್ಧಿ ಓಡಿಸಬೇಡ ನೀ, ಬೊಮ್ಮನಾಗಬೇಡ, ಚಪ್ಪಲಿ ಹೊಲಿಬೇಡ ನೀ, ಚಮ್ಮಾರನಾಗಬೇಡ. ಬಟ್ಟೆ ಬೇಡ, ವ್ಯಾಪಾರ ಬೇಡ, ಏನೂ ಆಗಬೇಡ ನೀ, ಬಯಸಿದಂತಾಗಬೇಡ. ಕೊನೆಗೆ ಮಾನವನಾಗಬೇಡ. ಮೋಸ ಬೇಡ, ದಾನ ಬೇಡ, ಧರ್ಮ ಬೇಡ, ನಿನ್ನ ನೀತಿ ನಿಯಮ ಬೇಡ. ಹಿಂದು, ಮುಸ್ಲಿಮ್, ಬೌದ್ಧ, ಕ್ರೈಸ್ತ, ಏನೂ ಆಗಬೇಡ ನೀ,...


 • ಪ್ರಕೃತಿಯಲ್ಲಿನ ವಿರೋಧಾಭಾಸ

  ಇವತ್ತಿಗೆ ಭೂಮಿಯ ಮೇಲೆ ಜನರ ಸೇರಿಸಿ ಇತರೆ ಎಲ್ಲ ಪ್ರಾಣಿಗಳಿಗೂ ಬಹಳ ರೀತಿಯಲ್ಲಿ ಕೆಟ್ಟ ಪರಿಣಾಮಗಳಾಗ್ತಿವೆ. ಇದಕ್ಕೆ ಮಾನವನೇ ಮುಖ್ಯ ಕಾರಣ. ಜನರು ತಾವು ಕಂಡುಹಿಡಿದ ಅದೆಷ್ಟೋ ಲೆಕ್ಕವಿಲ್ಲದ ಆವಿಷ್ಕಾರಗಳು, ಕಂಡುಕೊಂಡ ಪ್ರಕೃತಿಯ ಚಮತ್ಕಾರಗಳು, ಕಲೆ, ಕಟ್ಟಡ ಕಟ್ಟುವ ಪದ್ಧತಿ, ಗಣಿಗಾರಿಕೆ, ಔಷಧಗಳ ಆವಿಷ್ಕಾರ ಇವೆಲ್ಲವೂ ನಮಗೆ ಸಹಾಯ ಮಾಡುವುದಕ್ಕಿಂತ ಹೆಚ್ಚಿಗೆ ಅಪಾಯಗಳನ್ನೇ ತಂದುಕೊಟ್ಟಿವೆ. ಪ್ರಕೃತಿಯಲ್ಲಿ ಬೇರೆ ಪ್ರಾಣಿಗಳಲ್ಲಿ ಕಾಣದ ಬುದ್ಧಿವಂತಿಕೆ, ರೀತಿ-ನೀತಿಗಳು, ಕಲಿಕೆ ಹಾಗೂ ತಿಳಿದ ವಿಷಯವನ್ನು ಮುಂದಿನ...


 • ಬೆರಳೆಣಿಕೆ

  ಯಾರದ್ದೂ ಜೀವನ ಮರಣದಲಿ ಮುಗಿದು, ಮುಚ್ಚಿಟ್ಟರು ಅವರ ಮಣ್ಣಲ್ಲಿ ಅಗೆದು. ಮುಗಿಯಿತು ಎಲ್ಲ ಒಂದೇ ಘಳಿಗೆಗೆ, ಸಾಲದು ಈ ಜೀವನ ಬೆರಳೆಣಿಕೆಗೆ. ಇರುವುದು ಜೀವನ ಮುಂದಿನ ದಿನ, ಅನ್ನುತ ಅನುದಿನ ಹಾತೊರೆದಿದೆ ಮನ. ಅರಸಿದ ಆ ಜೀವನ ಸಿಗುವುದು ಎಂದಿಗೆ, ದಿನಗಳು ಸಿಗದಾಗಿದೆ ಈ ಬೆರಳೆಣಿಕೆಗೆ. ಈ ಹೊತ್ತಿಗೆ ಈ ದಿನ ಉಸಿರಾಡಿದೆ ಜೀವ, ಆದರೂ ಮುಂದಿನ ದಿನದ ಆಸರೆಯ ಭಾವ. ಇಂದಿಗೇಕೆ ತೃಪ್ತಿಯಿಲ್ಲ ಬದುಕುವ ಘಳಿಗೆಗೆ? ದಿನಗಳು ಸಾಲದಾಗಿವೆ...


 • ಮುಳುಗಡೆ

  ಒಂದೊಂದು ಯೋಚನೆ ಒಂದೊಂದು ಕಡೆ, ನೀನೊಂದು ಕಡೆ, ನಾನೊಂದು ಕಡೆ. ನಮ್ಮ ಬಂಧನದೆ ಸಿಗದಿರೆ ನಮಗೆ ಬಿಡುಗಡೆ, ಜೀವನ ಕೈಗೆ ಸಿಗದಂಗೆ ಮುಳುಗಡೆ. ಗಾಳಿಯು ಎಲ್ಲೊ, ದೋಣಿಯು ಎಲ್ಲೊ, ನಿಂತಲ್ಲೆ ಜೀವನ ನಿಂತಂತಿದೆ. ಸಾಗುವ ಅಲೆಗಳ ತಡೆದರೆ ಗೋಡೆ, ಜೀವನ ಕೈಗೆ ಸಿಗದಂಗೆ ಮುಳುಗಡೆ. ನಿತ್ಯವೂ ನೂತನ ಮೈಲಿಗಲ್ಲು, ಹೋಲಿಕೆ ಸಿಗದು ಯಾವುದರಲ್ಲು. ಗಾಳಿಯು ಬೆಂಕಿಯು ಸೇರಿದ ಕಡೆ, ಅಲ್ಲಿಯೆ ನಮ್ಮ ಬಾಂಧವ್ಯದ ಮುಳುಗಡೆ. - ಆದರ್ಶ