ಒಂದು ಕಡೆ ಸೋತರೂ ಇನ್ನೊಂದು ಕಡೆ ಗೆಲ್ಲು,
ಒಂದೇ ಹಾದಿ ಇರುವ ಊರು, ಸಿಗದು ಇಲ್ಲಿ ಎಲ್ಲು.
ಎದುರು ಬರಲಿ ಎಡಬಿಡದೆ ಸಾವಿರಾರು ಕಲ್ಲು,
ಅವುಗಳ ಮೇಲೆ ಬೀಳದೆ, ಧೃಡವಾಗಿ ನೀನು ನಿಲ್ಲು.

ನಿತ್ಯವೂ ನೂತನ ನೋವು ಬರಲಿ,
ಅದುವೇ ಬದುಕಿನ ಕೊನೆಯೇ ಇರಲಿ,
ಕಡೆಯ ಯತ್ನವ ನಿಲ್ಲಿಸದೇ ಕೈಚೆಲ್ಲಿ,
ಅಲ್ಲೆ ನಿಲ್ಲಬೇಕಿದೆ, ಧೃಡವಾಗಿ ನಿನ್ನಲ್ಲಿ.

ನೂರು ಕಡೆ ಸೋತರೂ ಮತ್ತೊಂದು ಕಡೆ ನಿಲ್ಲು,
ಸಮವಾಗಿ ಇರುವ ಹಾದಿ ಸಿಗದು ನಿನಗೆಲ್ಲು.
ಉರಿದುಬಿಡಲಿ ಚಿಲುಮೆ ನಿನ್ನಯ ಮನದಲ್ಲಿ,
ಧೃಡವಾಗಿ ನಿಂತಿರು, ಸಮಯದ ಕೊನೆಯಲ್ಲು.

- ಆದರ್ಶ