ಗಬ್ಬು
by Adarsha
ಜಗವಿದು ಎಚ್ಚರದ ಭ್ರಮೆಯಲ್ಲಿ ಮುಳುಗಿ,
ಉಳಿದಿಹದು ಕತ್ತಲೆಯ ಕೋಣೆಯಲ್ಲಿ ಮಲಗಿ.
ಎಲ್ಲಿಯೊ ಯಾವುದೊ ಹೊಸ ದಿನದೆಣಿಕೆಯ ಹುರುಪು,
ಇಲ್ಲಿಹುದು ಅದರ ಸುಳ್ಳಿನ ಹೊಳಪು.
ಬಿತ್ತರಿಸು ಲೋಕವೇ ನಿನ್ನೊಳಗಿನ ಗಾರುಡಿ,
ಬಿಗಿಹಿಡಿ ಜನ ನೋಡುವ ದಾರಿಗೆ ಕನ್ನಡಿ .
ಎಲ್ಲಿಯೊ ಯಾವುದೋ ಊರಿನ ಅಣಕು,
ಇಲ್ಲಿಹುದು ಅದರ ಸುಳ್ಳಿನ ತುಣುಕು.
ಜಗವಿದು ಹುಚ್ಚಿನ ಅಲೆಯಲ್ಲಿ ಮುಳುಗಿ,
ಉಳಿದಿಹದು ಹರಿದ ಬಟ್ಟೆ ತೊಟ್ಟು ತಾನಾಗಿ.
ಎಲ್ಲಿಯೊ ಯಾವುದೋ ಹೊಸ ಯುಗದ ಮಬ್ಬು,
ಇಲ್ಲಿಹುದು ಅದರ ಸುಳ್ಳಿನ ಗಬ್ಬು.
- ಆದರ್ಶ