ಹೃದಯ ಇಲ್ಲಿದೆ, ಬೆಂಕಿ ಹಚ್ಚು,
ಪ್ರೀತಿಯಲ್ಲಿದೆ ಎಲ್ಲ ಹುಚ್ಚು.
ಮನದಲ್ಲಿ ಕವನ ಬಂದಂತೆ ಗೀಚು,
ಪ್ರೀತಿಲಿ ತೇಲಾಡುವ ಗೀಳೇ ಹೆಚ್ಚು.

ಊರು ಯಾವುದು, ಹೋಗು ಹೊರಗೆ,
ಮನವು ನಿಂತಲ್ಲಿನ ಜನರೂ ಓರೆಗೆ.
ದಿಕ್ಕು ಯಾವು ಮನದ ಒಲವಿಗೆ,
ಕನಸು ಬೀಳುವುದೆ ಕೇಳಿದ ಆ ಕಣಿಗೆ?

ಕಾಡು ಇದು ಮನದ ಹುಚ್ಚು,
ತಿರುಗಿ ನೋಡದೆ ಬೆಂಕಿ ಹಚ್ಚು.
ಒಲವು ಗೆಲ್ಲಲಿ, ಮನವು ಸೋಲಲಿ,
ಬರಡು ಮನದಲ್ಲಿ ಸದಾ ಕರುಣೆ ತುಂಬಿರಲಿ.

- ಆದರ್ಶ